21ರಿಂದ ಹಾಲಸ್ವಾಮೀಜಿಗಳ ಜಾತ್ರೋತ್ಸವ

ಹರಪನಹಳ್ಳಿ:

         ಹಿಂದೂ-ಮುಸ್ಲಿಂ ಭಾವೈಕ್ಯ ಸಾರುವ ಪಟ್ಟಣದ ವಾಲ್ಮೀಕಿ ನಗರದ ಹಾಲಸ್ವಾಮಿ ಮಠದ ಶ್ರೀ ಹಾಲಸ್ವಾಮೀಜಿಗಳ ಜಾತ್ರಾ ಮಹೋತ್ಸವ ಅ.21ರಿಂದ 23ರವರೆಗೆ ವಿಜೃಂಭಣೆಯಿಂದ ಜರುಗಲಿದೆ ಎಂದು ಶ್ರೀ ಸಣ್ಣ ಹಾಲಸ್ವಾಮೀಜಿ ತಿಳಿಸಿದರು.

           ಪಟ್ಟಣದ ವಾಲ್ಮೀಕಿ ನಗರದ ಹಾಲಸ್ವಾಮಿ ಮಠದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ಪ್ರತಿ ವರ್ಷದಂತೆ ಪಟ್ಟಣ ಹಾಗೂ ವಾಲ್ಮೀಕಿ ನಗರದ ಮೂರು ಕೆರೆಯ ಸಮಸ್ತರು ನೇತೃತ್ವದಲ್ಲಿ ಜಾತ್ರೋತ್ಸವ ನೆರವೇರಲಿದೆ. ಅ.21ರಂದು ಭಾನುವಾರ ರಾತ್ರಿ 11 ಗಂಟೆಗೆ ಮುಳ್ಳು ಗದ್ದಿಗೆ ಉತ್ಸವ, ಅ.22ರಂದು ಸೋಮವಾರ ಸಂಜೆ 5ಕ್ಕೆ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ರಥೋತ್ಸವ ನೆರವೇರುವುದು. ಅ.23ರಂದು ಮಂಗಳವಾರ ಸಂಜೆ 5ಕ್ಕೆ ಅಡ್ಡಪಲ್ಲಕ್ಕಿ (ಕಡಬಿನ ಕಾಳಗ) ಜರುಗಲಿದೆ ಎಂದು ಮಾಹಿತಿ ನೀಡಿದರು.

         ಪಟ್ಟಣದ ತೆಗ್ಗಿನಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ಜಿ.ಕರುಣಾಕರರೆಡ್ಡಿ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ಎಂ.ಪಿ.ರವೀಂದ್ರ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಜಾತ್ರಾ ಮಹೋತ್ಸವ ಅಂಗವಾಗಿ ಅರಸೀಕೆರೆ ರಸ್ತೆಯ ಮಠದ ಹೊಲದಲ್ಲಿ ಅ.23 ಮತ್ತು 24ರಂದು ಪ್ರಸಿದ್ಧ ಪೈಲ್ವಾನ್ ಅವರಿಂದ ಬಯಲು ಜಂಗೀ ಕುಸ್ತಿ ಸ್ಪರ್ಧೆ ನಡೆಯಲಿದೆ ಎಂದು ಹೇಳಿದರು.

        ಈ ಸಂದರ್ಭದಲ್ಲಿ ಮಠದ ಮುಖ್ಯಸ್ಥರಾದ ಶಿರಹಟ್ಟಿ ಬಸವರಾಜ, ನಿಟ್ಟೂರು ದೊಡ್ಡಹಾಲಪ್ಪ, ಮಂಡಕ್ಕಿ ಸುರೇಶ್, ರಾಯದುರ್ಗದ ದುರ್ಗಪ್ಪ, ಆಲೂರು ಹನುಮಂತಪ್ಪ, ವೈ.ನಾಗಪ್ಪ, ಕವಸರ ಬಸವರಾಜ, ಗಿಡ್ಡಳ್ಳಿ ಹನುಮಂತಪ್ಪ, ದ್ಯಾಮಜ್ಜಿ ಮಂಜುನಾಥ್, ಹಳೆಬ್ಯಾಡರ ಸಣ್ಣಕೆಂಚಪ್ಪ, ವಿನಾಯಕ ಇತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap