ಸೇನಾ ಬಲವರ್ಧನೆಯತ್ತ ದೃಷ್ಠಿ ಹರಿಸಿದ ಪಾಕ್….!!

0
22
ನವದೆಹಲಿ:
     ಭಾರತ ತನ್ನ ವಾಯು ಮತ್ತು ಭೂಮಿಯ ಮೇಲಿನ ಯುದ್ಧ ಸಾರ್ಮಥ್ಯವನ್ನು ಕ್ರಮೇಣ ಹೆಚ್ಚಿಸಿಕೊಳ್ಳಲು ಯೋಜನೆ ನಡೆಸುತ್ತಿರುವಾಗ ನರೆಯ ಹಿತಶತ್ರು ಪಾಕಿಸ್ಥಾನ ತನ್ನ ಗಡಿಯಲ್ಲಿ ಶಕ್ತಿಯನ್ನು ಹೆಚ್ಚಿಸುವಲ್ಲಿ ಹೆಣಗಾಡುತ್ತಿದೆ, ತನ್ನ ಸೇನೆಗೆ ಬಲ ತುಂಬುವ ಉದ್ದೇಶದಿಂದ 600 ಯುದ್ಧ ಟ್ಯಾಂಕ್ ಗಳನ್ನು ಖರೀದಿಸುವ ಹೊಸ ಯೋಜನೆಯೊಂದನ್ನು ರೂಪಿಸುತ್ತಿದೆ ಎಂದು ಗುಪ್ತಚರ ಮೂಲಗಳು ಮಾಹಿತಿ ನೀಡಿವೆ ಎಂದು ತಿಳಿದು ಬಂದಿದೆ . 
    ಸುಮಾರು 600 ಸಮರ ಟ್ಯಾಂಕ್ ಗಳ ಪೈಕಿ 360 ಟ್ಯಾಂಕ್ ಗಳನ್ನು ವಿದೇಶದಿಂದ ಹಾಗೂ 220 ಟ್ಯಾಂಕ್ ಗಳನ್ನು ಚೀನಾ ರಾಷ್ಟ್ರದ ನೆರವಿನೊಂದಿಗೆ ದೇಶೀಯವಾಗಿ ಅಭಿವೃದ್ಧಿ ಪಡಿಸುವ ಉದ್ದೇಶವನ್ನು ಪಾಕಿಸ್ತಾನ ಹೊಂದಿದೆ ಎಂದು ತಿಳಿದುಬಂದಿದೆ. 
       ಇದರೊಂದಿಗೆ ರಷ್ಯಾದ ಟಿ-90 ಯುದ್ಧ ಟ್ಯಾಂಕ್ ಗಳನ್ನೂ ಖೀರಿದಿಸಲು ಪಾಕಿಸ್ತಾನ ಚಿಂತನೆ ನಡೆಸಿದೆ ಎಂದು ಗುಪ್ತಚರ ಸಂಸ್ಥೆಯ ಅಧಿಕೃತ ವರದಿಗಳು ತಿಳಿಸಿವೆ. 
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here