ಡ್ಯಾಂ ಕುಸಿತ 65 ಮಂದಿ ದಾರುಣ ಸಾವು…!!!

0
57
ಬ್ರೇಜಿಲ್:
   
         ಮಾನವನ ದಷ್ಕೃತ್ಯಕ್ಕೆ ಪ್ರಕೃತಿ ತನ್ನ ಕಡೆಯಿಂದ ಅತಿ ದಾರುಣವಾಗಿ ಸ್ಪಂದಿಸುವುದು ಸಾಮಾನ್ಯ ಅದಕ್ಕೆ ತಾಜಾ ಉದಾಹರಣೆಯಾಗಿ  ಅವೈಜ್ಞಾನಿಕ ಗಣಿಗಾರಿಕೆಯ ಪರಿಣಾಮವಾಗಿ  ಬ್ರಮುಡಿನ್ಹೋ ಅಣೆಕಟ್ಟು ಕುಸಿದಿದ್ದು , ಡ್ಯಾಂನಲ್ಲಿದ್ದ ಅಪಾರ ಪ್ರಮಾಣದ ನೀರು ಮತ್ತು ಹೂಳು ಏಕಕಾಲಕ್ಕೇ ಹರಿ ಪರಿಣಾಮ ಸುಮಾರು 65ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು ನೂರಾರು ಮಂದಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
        ಜನವರಿ 25 ರಂದು ನಡೆದ ಅವಘಡದಲ್ಲಿ ಈ ವರೆಗೂ ಕನಿಷ್ಠ 65 ಮಂದಿ ಸಾವನ್ನಪ್ಪಿದ್ದು, ಸುಮಾರು 305 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಣೆಕಟ್ಟು ಕುಸಿದ ಪರಿಣಾಮ ಅಣೆಕಟ್ಟಿನಲ್ಲಿದ್ದ ಸುಮಾರು 11.7  ಮೀಟರ್ ಕ್ಯೂಬೆಕ್ ನೀರು ಸುತ್ತಮುತ್ತಲ ಗ್ರಾಮಗಳಿಗೆ ಹರಿದಿದಿದೆ. ಪರಿಣಾಮ ನೂರುರಾ ಗ್ರಾಮಗಳು ನೀರಿನಲ್ಲಿ ಮುಳುಗಡೆಯಾಗಿವೆ ಎಂದು ತಿಳಿದು ಬಂದಿದೆ. ಅಲ್ಲದೆ ನೀರಿನೊಂದಿಗೆ ಅಣೆಕಟ್ಟೆಯಲ್ಲಿದ್ದ ಸುಮಾರು  ಮೀಟರ್ ಎತ್ತರದ ಹೂಳು ಕೂಡ ಹರಿದಿದ್ದು ನೂರಾರು ಮಂದಿ ಹೂಳಿನಲ್ಲಿ ಸಿಲುಕಿ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
          ಬ್ರೆಜಿಲ್ ಇತಿಹಾಸದಲ್ಲೇ ಇದು ಅತೀ ದೊಡ್ಡ ಡ್ಯಾಂ ದುರಂತ ಇದಾಗಿದ್ದು, ಈ ಹಿಂದೆಂದೂ ಇಂತಹ ದುರಂತ ಸಂಭವಿಸಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಡ್ಯಾಂ ದುರಂತಕ್ಕೆ ಅವೈಜ್ಞಾನಿಕ ಗಣಿಗಾರಿಕೆಯೇ ಕಾರಣ ಎಂದು ಹೇಳಲಾಗುತ್ತಿದೆ. ಡ್ಯಾಸುತ್ತಮುತ್ತ ಪ್ರದೇಶದಲ್ಲಿ ಕಳೆದ ಹಲವು ವರ್ಷಗಳಿಂದ ಅಕ್ರಮ ಗಣಿಗಾರಿಕೆ ನಡೆಸಲಾಗುತ್ತಿತ್ತು. ಈ ಅಕ್ರಮ ಗಣಿಗಾರಿಕೆಯಿಂದಾಗಿಯೇ ಡ್ಯಾಂನ ಅಡಿಪಾಯದ ಮಣ್ಣು ಸಡಿಲಗೊಂಡಿದ್ದು, ಕಳೆದ ಶುಕ್ರವಾರ ಡ್ಯಾಂ ಕುಸಿದಿದೆ.ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ರೆಡ್ ಕ್ರಾಸ್ ಸಂಸ್ಥೆಯ ಸಾವಿರಾರು ಕಾರ್ಯಕರ್ತರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

LEAVE A REPLY

Please enter your comment!
Please enter your name here