ಮಾಲೀಕನನ್ನು ಸಾಯಿಸಿದ ಕ್ಯಾಸೋವಾರಿ ಪಕ್ಷಿ

0
28
ಪ್ಲೋರಿಡಾ:
    ಸಾಕು ಪ್ರಾಣಿಗಳು ಸೌಮ್ಯ ಸ್ವರೂಪಿಗಳಾದರೆ ಅವು ಎಲ್ಲರಿಗೂ ಮುದ್ದು ಆದರೆ ಅವೆ  ಯಮ ಸ್ವರೂಪಿಗಳಾದರೆ ನಮ್ಮ ಜೀವಕ್ಕೆ ವಿಪತ್ತು  ಇದೇರೀತಿಯ ಒಂದು ತಾಜಾ ಉದಾಹರಣೆಯಾಗಿ ಫ್ಲೋರಿಡಾ ನಗರದಲ್ಲಿ ನಡೆದಿದೆ
    ಸಾಕಿ ಬೆಳೆಸಿದ ಮಾಲೀಕನನ್ನೇ ಪಕ್ಷಿಯೊಂದು ಕಚ್ಚಿ ಕೊಂದು ಹಾಕಿರುವ ಘಟನೆ  ನಡೆದಿದ್ದು ಈ ಘಟನೆಯಿಂದ ಜನರು ಹೆದರಿದ್ದಾರೆ . ಈ ಘಟನೆಯ ರೂವಾರಿ ಕ್ಯಾಸೋವಾರಿ ಎಂಬ ಜಾತಿಗೆ ಸೇರಿದ ಪಕ್ಷಿ ಎಂದು ಗುರುತಿಸಲಾಗಿದೆ . ತನ್ನನ್ನು ಸಾಕಿ ಬೆಳೆಸಿದ್ದ ಮಾಲೀಕನನ್ನು ಕೋಪದಿಂದ ಕೊಂದು ಹಾಕಿದೆ. ಆಸ್ಟ್ರಿಚ್ ನಂತಹ ಹಾರಲಾಗದ ದೊಡ್ಡ ಜಾತಿಯ ಪಕ್ಷಿಗಳ ಸಾಲಿಗೆ ಸೇರುವ ಕ್ಯಾಸೋವಾರಿ ಪಕ್ಷಿ ತನ್ನ ಮಾಲೀಕ 75 ವರ್ಷದ ಮಾರ್ವಿನ್ ಹೆಜೋಸ್ ಎಂಬಾತನನ್ನು ಕಚ್ಚಿ ಕೊಂದು ಹಾಕಿದೆ. 
       ಮಾರ್ವಿನ್ ಹೆಜೋಸ್ ತನ್ನ ಫ್ಲೋರಿಡಾ ನಿವಾಸದ ಸಮೀಪದಲ್ಲೇ ಖಾಸಗಿ ಫಾರ್ಮ್ ಹೌಸ್ ನಿರ್ಮಾಣ ಮಾಡಿಕೊಂಡು ದಶಕಗಳಿಂದಲೂ ಇಲ್ಲಿ ಅಪರೂಪದ ತಳಿಯ ಪ್ರಾಣಿ ಮತ್ತು ಪಕ್ಷಿಗಳನ್ನು ಸಾಕುತ್ತಿದ್ದನಂತೆ. ಇತ್ತೀಚೆಗೆ ಈತ ತನ್ನ ನಿವಾಸದ ಮಹಡಿ ಮೇಲೆ ಹೋಗಿದ್ದಾಗ ಆತ ಜಾರಿ ಬಿದ್ದಿದ್ದಾನೆ. ಈ ವೇಳೆ ಅಲ್ಲಿಯೇ ಇದ್ದ ಈ ಕ್ಯಾಸೋವಾರಿ ಪಕ್ಷಿ ಆತನ ಮೇಲೆ ದಾಳಿ ಮಾಡಿ ಆತನ ಕುತ್ತಿಗೆಯನ್ನು ಕಚ್ಚಿ ಹಾಕಿದೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ಮಾರ್ವಿನ್ ಹೆಜೋಸ್ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾನೆ. ಸುಮಾರು ಹೊತ್ತಿನ ಬಳಿಕ ಸ್ಥಳಕ್ಕಾಗಮಿಸಿದ ಮನೆಯವರು ಮಾರ್ವಿನ್ ಕೆಳಗೆ ಬಿದ್ದಿರುವುದನ್ನು ಗಮನಿಸಿ ಹತ್ತಿರ ಹೋದಾಗ ಆತ ಸಾವನ್ನಪ್ಪಿರುವುದು ತಿಳಿದಿದೆ. 
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here