ನೇಪಾಳಕ್ಕೆ ಶೀಘ್ರದಲ್ಲಿ ಭಾರತದಿಂದ ರೈಲು

0
34

ದೆಹಲಿ:  

     ಇಷ್ಟು ದಿನ ಭಾರತದಿಂದ ಬರೀ ಬಸ್ಸು ಮತ್ತು ವಿಮಾನ ಸಂಪರ್ಕ ಹೊಂದಿದ್ದ ನೇಪಾಳಕ್ಕೆ ಇನ್ನೂ ಮುಂದೆ ರೈಲ್ವೆ ಸಂಪರ್ಕ ಸಿಗಲಿದೆ ಭಾರತ-ನೇಪಾಳದ ನಡುವೆ ಬ್ರಾಡ್‌ಗೇಜ್‌ ಮೇಲೆ ಮೊಟ್ಟ ಮೊದಲ  ಪ್ರಯಾಣಿಕ ರೈಲು ಶೀಘ್ರದಲ್ಲೇ ಸಂಚಾರ ಆರಂಭಿಸಲಿದೆ.

     ಬಿಹಾರದ ಜಯನಗರದಿಂದ ನೇಪಾಳದ ಜನಕ್‌ಪುರ ಪ್ರದೇಶದ ಧನುಸಾ ಜಿಲ್ಲೆಯ ಕುರ್ತಾವರೆಗೆ 34 ಕಿಮೀ ಮಾರ್ಗದಲ್ಲಿ ರೈಲು ಚಲಿಸಲಿದೆ. ಈ ನಿಟ್ಟಿನಲ್ಲಿ ಜಯನಗರ ರೈಲ್ವೇ ನಿಲ್ದಾಣದಲ್ಲಿ ಇಮಿಗ್ರೇಷನ್‌ ಕೇಂದ್ರ ಆರಂಭಿಸಲಾಗುವುದು.

    ಈ ಮಾರ್ಗದಲ್ಲಿ ಚಲಿಸಲು ಭಾರತ ಹಾಗು ನೇಪಾಳ  ನಾಗರಿಕರಿಗೆ ಯಾವುದೇ ವೀಸಾ ಬೇಕಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಉದ್ದೇಶಕ್ಕಾಗಿ ಲೋಕೋ ಇಂಜಿನ್‌ಗಳು, ಕೋಚ್‌ಗಳು, ರೋಲಿಂಗ್‌ ಸ್ಟಾಕ್‌ಗಳು ಸೇರಿದಂತೆ ಅನೇಕ ಸಾಮಾಗ್ರಿಗಳನ್ನು ಭಾರತದಿಂದ ನೇಪಾಳ ಗುತ್ತಿಗೆ ಪಡೆಯಲಿದೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here