ನೊಟ್ರೆ ಡೇಮ್ ಕ್ಯಾಥೆಡ್ರಲ್ ಕಟ್ಟಡದಲ್ಲಿ ಬೆಂಕಿ ..!!!!

0
10
ಪ್ಯಾರಿಸ್​:
         ಐತಿಹಾಸಿಕ ಕಟ್ಟಡಗಳ ನಗರಗಳಲ್ಲಿ ಒಂದಾದ ಪ್ಯಾರಿಸ್​ನ  ನೊಟ್ರೆ ಡೇಮ್ ಕ್ಯಾಥೆಡ್ರಲ್​ ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಈ ಬೆಂಕಿ ಅವಘಡದ ಪರಿಣಾಮವಾಗಿ ಕಟ್ಟಡದ ಕೆಲ ಪ್ರಮುಖ ಭಾಗಗಳು​ ಕುಸಿದು ಬಿದ್ದಿವೆ ಎಂದು ತಿಲಿದು ಬಂದಿದೆ . 
          ಮೂಲಗಳ ಪ್ರಕಾರ ಈ  ಕಟ್ಟಡದ ನವೀಕರಣ ಕೆಲಸಗಳು ನಡೆಯುತ್ತಿದ್ದವು. ಈ ವೇಳೆ ಚಿಕ್ಕದಾಗಿ ಕಾಣಿಸಿಕೊಂಡ ಬೆಂಕಿ ಕ್ಷಣ ಮಾತ್ರದಲ್ಲಿ ಎಲ್ಲಡೆ ಹಬ್ಬಿ ಕಟ್ಟಡದ ಪ್ರಮುಖ ಭಾಗಗಳು ನೆಲಕ್ಕುರುಳಿದವು. ಬೆಂಕಿ ನಂದಿಸಲು ಅಗ್ನಿಶಾಮಕದ ದಳದ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅಧಿಕಾರಿಗಳು, ತುಂಬಾ ಹಳೆಯ ಕಟ್ಟಡವಾಗಿರುವುದರಿಂದ ಬೆಂಕಿಯನ್ನು ನಿಯಂತ್ರಣ ಮಾಡುವುದು ಕಷ್ಟದ ಕೆಲಸ. ಆದರೂ ಕಾರ್ಯಾಚರಣೆ ಭರದಿಂದ ಸಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಹೇಳಿದ್ದಾರೆ.
ಕಟ್ಟಡ ಬೆಂಕಿಗೆ ಆಹುತಿಯಾಗುವುದನ್ನು ನಾಗರೀಕರೊಬ್ಬರು ತಮ್ಮ ಟ್ವಿಟ್ಟರೆ್ ನಲ್ಲಿ ಹಾಕಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here