ನೇಪಾಳದಲ್ಲಿ ನೋಟ್ ಬ್ಯಾನ್….!?

ನೇಪಾಳ:
           ಭಾರತದಲ್ಲಿ ನೋಟ್ ಬ್ಯಾನ್ ನಂತರ ಚಲಾವಣೆಗೆ ಬಂದ ನಂತರ ನೂತನ 2000, 500 ಹಾಗೂ 200 ರುಪಾಯಿ ಮುಖಬೆಲೆಯ ನೋಟುಗಳನ್ನು ನಮ್ಮ ದೇಶ ಬಿಟ್ಟು ಬೇರೆ ದೇಶಗಳಲ್ಲಿ ನಿಷೇಧಿಸುವ ಪ್ರಕ್ರಿಯೆಗೆ ನೇಪಾಳ ಮುನ್ನುಡಿ ಬರೆದಿದೆ. 
            ನೇಪಾಳದಲ್ಲಿ ಭಾರತ ಸರ್ಕಾರ ಜಾರಿಗೆ ತಂದಿರುವ ನೂತನ 2000, 500 ಹಾಗೂ 200 ರುಪಾಯಿ ಮುಖಬೆಲೆಯ ನೋಟುಗಳ ಚಲಾವಣೆಯನ್ನು ನಿಷೇಧಿಸುವ ಮೂಲಕ ಹೊಸ ಬದಲಾವಣೆಗೆ ನಾಂದಿ ಹಾಡಿದೆ . ಈ ನಿರ್ಧಾರದಿಂದ ನೇಪಾಳ ಪ್ರವಾಸ ಕೈಗೊಳ್ಳುವ ಭಾರತೀಯ ಪ್ರವಾಸಿಗರಿಗೆ ತೊಂದರೆಯಾಗುವ ನಿರೀಕ್ಷೆ ಇದೆ. 2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 1000 ಹಾಗೂ 500 ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ಬಳಿಕ 2000, 500 ಹಾಗೂ 200 ಮುಖಬೆಲೆಯ ನೋಟುಗಳನ್ನು ಮುದ್ರಿಸಿದ್ದು ಚಲಾವಣೆಗೆ ತರಲಾಗಿತ್ತು. ಇದೀಗ ನೇಪಾಳ ಸರ್ಕಾರ ತಮ್ಮ ದೇಶದಲ್ಲಿ ಭಾರತದ ನೂತನ ನೋಟುಗಳ ಚಲಾವಣೆ ನಿಷೇಧಿಸಿದೆ. 
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap