ಅಭಿನಂದನ್ ಬಿಡುಗಡೆ : ಮರು ದಾಳಿಯ ಭಯದಲ್ಲಿ ಪಾಕಿಸ್ತಾನ..!!!

ಇಸ್ಲಾಮಾಬಾದ್:
         ಭಾರತ ಮೊನ್ನೆ ಮಾಡಿದ ದಾಳಿಯಿಂದ ಬೆಚ್ಚಿ ಬಿದ್ದಿರುವ ಪಾಕ್ ಶಾಸಕ ಮತ್ತು ಸಚಿವರು ಭಯದಲ್ಲಿ ದಿನದೂಡುವ ಪರಿಸ್ಥಿತಿ ಎದುರಾಗಿದೆ ಎಂದು  ಶೇಖ್ ರಶೀದ್ ಅಹಮ್ಮದ್ ಹೇಳಿದ್ದಾರೆ  
       ರಶೀದ್ ಅವರು ಮಾತ್ರ ಅಭಿನಂದನ್ ಅನ್ನು ಭಾರತಕ್ಕೆ ಮರಳಿ ಕಳುಹಿಸುವುದು ಸರಿಯಲ್ಲ ಎಂದು ಭಯದಿಂದಕೂಡಿದ ಅಸಮಾಧಾನ ಹೊರಹಾಕಿದ್ದಾರೆ. “ಒಂದೊಮ್ಮೆ ಅಭಿನಂದನ್ ಅವರನ್ನು ಭಾರತಕ್ಕೆ ಹಿಂದಿರುಗಿಸಿದರೆ ಅದರ ಬೆನ್ನಲ್ಲೇ ಭಾರತ ಮತ್ತೆ ದೊಡ್ಡ ದಾಳಿ ನಡೆಸುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ” ಅವರು ಹೇಳಿದ್ದಾರೆ.
        ಅಹಮ್ಮದ್ ಪಾಕಿಸ್ತಾನದ ಸಂಸತ್ತಿನಲ್ಲಿ ಮಾತನಾಡಿ “ಇದು ವಾಜಪೇಯಿಯವರ ಕಾಲವಲ್ಲ, ಮೋದಿ ಕಾಲ ಅವರು ವಿಭಿನ್ನ ಯೋಚನೆ ಲಹರಿಯುಳ್ಳ ವ್ಯಕ್ತಿ.ಮೋದಿ ಭಾರತದ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಈ ದಾಳಿ ನಡೆಸಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.ಆದರೆ ನಾವೇನಾದರೂ ಭಾರತದ ಪೈಲಟ್ ಆಗಿರುವ ಅಭಿನಂದನ್ ಅವರನ್ನು ಹಿಂದಕ್ಕೆ ಕಳಿಸಿದ ಬಳಿಕ ಭಾರತ ಮತ್ತೆ ದಾಳಿ ಮಾಡಿದರೆ ನಮ್ಮ ಗತಿ ಏನು? ಅಲ್ಲಿ ಇರುವುದು ಮೋದಿ , ನಾಳೆ ಮತ್ತೆ ದಾಳಿಯಾದರೆ ನಾವೇನು ಮಾಡೋಣ?” ಅವರು ಪ್ರಶ್ನಿಸಿದ್ದಾರೆ.
        ಪಾಕ್ ರೈಲ್ವೆ ಸಚಿವರು ಭಾರತದ ದಾಳಿಯ ಹಿನ್ನೆಲೆಯಲ್ಲಿ ನಡೆದ ಜಂಟಿ ಅಧಿವೇಶನದಲ್ಲಿ ಮಾತನಾಡಿದ್ದಾರೆ.“ಕಾರ್ಗಿಲ್ ವೇಳೆ ಒಂದು ಭಾರತೀಯ ವಿಮಾನ ಪಾಕ್ ಗಡಿಯಲ್ಲಿ ಅಪಘಾತಕ್ಕೀಡಾಗಿ ಬಿದ್ದಾಗಲೂ ಭಾರತ ಗಡಿ ನಿಯಂತ್ರಣ ರೇಖೆ ದಾಟಿಲ್ಲ. ಆದರೆ ಮೊನ್ನೆ ಮಂಗಳವಾರ 14 ಜೆಟ್ ವಿಮಾನಗಳು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ 300  ಮಂದಿ ಉಗ್ರರನ್ನು ಸದೆಬಡಿದಿರುವಾಗ ಻ವರಿಗೆ ನಾವ್ಯವಲೆಕ್ಕ.” ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap