ಸತ್ಯ ಬಾಯಿ ಬಿಡಸಲು ಕ್ರೌರ್ಯ ಮೆರೆದ ಪೊಲೀಸರು…!!

0
65

ಜಕಾರ್ತಾ:

     ಕಳ್ಳತನ ಮಾಡಿದ ಕಳ್ಳರ ಬಾಯಿಂದ ನಿಜ ಬರಿಸಲು ಏನೆಲ್ಲಾ ತಂತ್ರಗಳನ್ನು ಬಳಸುವ ಪೊಲೀಸರು ಹೊಸ ಐಡಿಯಾ ಕಂಡು ಹಿಡಿಯುವ ಭರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ.

    ಅದೇನೆಂದರೆ ಕಳ್ಳ ಬಾಯಿ ಬಿಡದೇ ಇದ್ದಾಗ ಅವನಿಗೆ ಸ್ನೇಕ್ ಟ್ರೀಟ್ ಮೆಂಟ್ ನೀಡಿದ್ದಾರೆ .ಸ್ನೇಕ್ ಟ್ರೀಟ್ ಮೆಂಟ್ ನಲ್ಲಿ ಪೊಲೀಸರು ಕಳ್ಳನ ದೇಹದ ಮೇಲೆ ಹಾವನ್ನು ಬಿಟ್ಟು ಬಾಯಿ ಬಿಡಿಸಲು ಪ್ರಯತ್ನಸಿದ ವಿಡಿಯೋ ವೈರಲ್ ಆಗಿದೆ.

    ಇಂಡೋನೇಷ್ಯಾದ ಪಪುವಾ ಪ್ರಾಂತ್ಯದ ಪೊಲೀಸರು ಹಾವನ್ನು ಬಿಟ್ಟು ವಿಭಿನ್ನವಾಗಿ ಕಳ್ಳನಿಂದ ಸತ್ಯ ಹೇಳಿಸಲು ಮಾಡಿದ್ದ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ಏನಿದೆ?

    ಮೊಬೈಲ್ ಕಳ್ಳತನ ಮಾಡಿದ ಆರೋಪದ ಮೇಲೆ ಬಂದಿತನಾದ ಒಬ್ಬಾತ ಎಷ್ಟೇ ಕೇಳಿದರು ಬಾಯಿ ಬಿಡಲಿಲ್ಲ. ಬಂಧನಕ್ಕೆ ಒಳಗಾಗಿದ್ದ ಆತ ವಿಚಾರಣೆ ವೇಳೆ ಸರಿಯಾದ ಮಾಹಿತಿಯನ್ನು ನೀಡಲಿಲ್ಲ. ಹೀಗಾಗಿ ಬಾಯಿ ಬಿಡಿಸಲು ಪೊಲೀಸರು ಆತನ ಎರಡು ಕೈಗಳನ್ನು ಕಟ್ಟಿ ಹಾಕಿ ಅವನ ಕುತ್ತಿಗೆಯ ಸುತ್ತ ಹಾವನ್ನು ಬಿಟ್ಟಿದ್ದಾರೆ. ಇದರಿಂದ ಕಳ್ಳ ಭಯದಿಂದ ಕುಳಿತಿದ್ದ. ಬಳಿಕ ಅಧಿಕಾರಿಯೊಬ್ಬರು ಬಂದು ಹಾವಿನ ಬಾಲ ಹಿಡಿದು ಕಳ್ಳನ ಬಾಯಿ ಹತ್ತಿರ ತೆಗೆದುಕೊಂಡು ಹೋಗಿ ಹಿಂಸೆ ಕೊಟ್ಟಿದ್ದಾರೆ. ಇದರಿಂದ ಭಯಗೊಂಡ ಕಳ್ಳ ಚೀರಾಡಿದ್ದಾನೆ.

     ಅಷ್ಟಕ್ಕೂ ಸುಮ್ಮನಾಗದ ಪೊಲೀಸರ ಹಾವಿನ ಎಡೆಯನ್ನು ಹಿಡಿದುಕೊಂಡು ಕಳ್ಳನ ಮುಖದ ಬಳಿ ತೆಗೆದುಕೊಂಡು ಹೋಗಿದ್ದಾರೆ. ಇದರಿಂದ ಕಳ್ಳ ತುಂಬಾ ಭಯಪಟ್ಟು ಕೂಗಾಡಿ, ಒದ್ದಾಡಿದ್ದಾನೆ. ಆದರೆ ಪೊಲೀಸ್ ಅಧಿಕಾರಿ ಮಾತ್ರ ನಗುತ್ತಾ ಮನರಂಜನೆ ರೀತಿಯಲ್ಲಿ ಕಳ್ಳನಿಗೆ ಹಿಂಸೆ ಕೊಟ್ಟಿದ್ದಾರೆ. ಇದೆಲ್ಲವನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here