ಮೊರಾಂಡಿ ಮರು ನಿರ್ಮಾಣಕ್ಕೆ ಚಾಲನೆ…!

ಜಿನೋವ್:

        ಮೊರಾಂಡಿ ಸೇತುವೆ ಪತನಗೊಂಡು ನಾಲ್ಕು ತಿಂಗಳಾದ ಮೇಲೆ ಸೇತುವೆ ಮರುನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆತಿದ್ದು. ಶಾರ್ಡ್ ನ ತಂತ್ರಜ್ಞ ರೆನ್ ಜೋ ಪಿಯಾನೋ ಅವರು ಮೊರಾಂಡಿ ಇದ್ದ ಜಾಗದಲ್ಲಿ ಹೊಸ ಸೇತುವೆಯೊಂದನ್ನು ಕಟ್ಟಲು ಉತ್ಸುಕನಾಗಿದ್ದೇನೆ ಮತ್ತು ಇದರ  ವಿನ್ಯಾಸ ಮಾಡಲು ನಾನು ಯಾವುದೇ ರೀತಿಯ ಹಣ ಪಡೆಯುವುದಿಲ್ಲ ಎಂದು ಹೇಳಿದ್ದಾರೆ.

        ಪಿಯಾನೋ ಅವರು ಈ ಆಗಸ್ಟ್ನಲ್ಲಿ ಮೊರಂಡಿ ಸೇತುವೆ ಕುಸಿದಾಗ ನಗರದಲ್ಲಿದ್ದ ಅವರು, ಈ ಯೋಜನೆಯನ್ನು ತಾವು ಸ್ವಯಂ ಪ್ರೇರಿತವಾಗಿ ಕೈಗೆತ್ತಿಕೊಂಡಿರುವುದಾಗಿ ತಿಳಿಸಿದ್ದಾರೆ ಸೇತುವೆ ವಿನ್ಯಾಸವು ನೋಡಲು ಸರಳವಾಗಿರಲಿದೆ ಆದರೆ ನಿಷ್ಪ್ರಯೋಜಕವಲ್ಲ ಎಂದು ಹೇಳಿದ್ದಾರೆ .

    ಸೇತುವೆ ನಿರ್ಮಾಣಕ್ಕಾಗಿ ಸುಮಾರು 200 ಮಿಲಿಯನ್ ಯುರೋ ಅಗತ್ಯವಿದ್ದು ಆದಷ್ಟು ಬೇಗನೆ ಸೇತುವೆ ಕಾಮಗಾರಿ ಮುಗಿಸಿಕೊಡುವ ಭರವಸೆ ನೀಡಿದ್ದಾರೆ.

     ಈ ಹಿಂದೆ ಸೇತುವೆ ನಿರ್ವಹಣೆ ಮಾಡುತ್ತಿದ ಆಟೋಸ್ಟ್ರೇಡ್ ಕಂಪೆನಿಯು ಟೆಂಡರ್ ನಲ್ಲಿ ಸೇತುವೆ ನಿರ್ಮಾಣಕ್ಕೆ ಸುಮಾರು 500 ಮಿಲಿಯನ್ ಯುರೋಗಳ ಅವಶ್ಯಕತೆ ಇದೆ ಮತ್ತು ತಾನು ಈ ಕಾಮಗಾರಿಯನ್ನು ಕೇವಲ 8 ತಿಂಗಳಲ್ಲಿ ಮುಗಿಸುವುದಾಗಿ ತಿಳಿಸಿದೆ. 

         ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap