ಮೋದಿ ಜಾಕೆಟ್ ಧರಿಸಿ ಸಂತಸ ಪಟ್ಟ ಕೊರಿಯಾ ಅಧ್ಯಕ್ಷ

0
28

ನವದೆಹಲಿ: 

         ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೆ ಇನ್ ತಮ್ಮ ಆತ್ಮೀಯ ಮಿತ್ರ ಮೋದಿ ಕೊಟ್ಟ ಜಾಕೆಟ್ ಅನ್ನು ಧರಿಸಿ ಸಂತಸವಾಗಿದೆ ಎಂದು ಕೊರಿಯಾ ಪ್ರಧಾನಿ ಟ್ವಿಟ್ ಮೂಲಕ ತಮ್ಮ ಸಂತಸ ಹಂಚಿಕೊಂಡಿದ್ದಾರೆ .

         ಕೊರಿಯಾದ ಅಧ್ಯಕ್ಷರಾದ ಮೂನ್ ಜೆ-ಇನ್ ಟ್ವೀಟ್ ಮೂಲಕ ,”ಭಾರತಕ್ಕೆ ಬಂದಿದ್ದಾಗ ಮೋದಿ ಜಾಕೆಟ್ ನೋಡಿ ನಾನು ಇಷ್ಟಪಟ್ಟಿದ್ದೆ. ಮೋದಿಯವರು ಧರಿಸುತ್ತಿದ್ದ ಪೂರ್ಣ ತೋಳಿನ ಕುರ್ತಾ ಮತ್ತು ಜಾಕೆಟ್ ನೊಂದಿಗೆ ಧರಿಸುತ್ತಿದ್ದ ಅರ್ಧ ತೋಳಿನ ಕುರ್ತಾವನ್ನ ನಾನು ಬಹಳ ಮೆಚ್ಚಿದ್ದೆ. ಇದನ್ನು ನೆನೆಪಿನಲ್ಲಿಟ್ಟುಕೊಂಡಿದ್ದ ಮೋದಿ ನನಗಾಗಿ ಜಾಕೆಟ್ ಸಿದ್ಧಪಡಿಸಿ ಕಳುಹಿಸಿದ್ದು, ಎಲ್ಲವೂ ಬಹಳ ಅಚ್ಚುಕಟ್ಟಾಗಿದೆ” ಎಂದು ಶ್ಲಾಘಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

LEAVE A REPLY

Please enter your comment!
Please enter your name here