ಯೋಗಾ ಸ್ಟುಡಿಯೋದ ಮೇಲೆ ಆತ್ಮಹತ್ಯಾ ಗುಂಡಿನ ದಾಳಿ

0
39
ತಲಹಸ್ಸೀ:
       ಯು ಎಸ್ ಎ ಸಂಯುಕ್ತ ರಾಷ್ಟ್ರಗಳಲ್ಲಿ ಒಂದಾದ ಫ್ಲೋರಿಡಾದ ರಾಜಧಾನಿ ತಲಹಸ್ಸೀದಲ್ಲಿನ ಯೋಗಾ ಸ್ಟುಡಿಯೋದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ ಮತ್ತು ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. 
        ಸ್ಥಳೀಯ ಕಾಲಮಾನದ ಪ್ರಕಾರ ಶುಕ್ರವಾರ ರಾತ್ರಿ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ವ್ಯಕ್ತಿಯೊಬ್ಬ ಈ ದಾಳಿಯನ್ನು ನಡೆಸಿದ್ದು, ದಾಳಿಯ ಉದ್ದೇಶಗಳು ಈವರೆಗೂ ತಿಳಿದುಬಂದಿದೆ. 
         ಅಪರಿಚಿತ ವ್ಯಕ್ತಿ ಗುಂಡು ಹಾರಿಸಲು ಆರಂಭಿಸುತ್ತಿದ್ದಂತೆಯೇ ಕೆಲವರು ತುರ್ತು ಸೇನೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸುತ್ತಿದ್ದಂತೆಯೇ ವ್ಯಕ್ತಿ ಗುಂಡು ಹಾರಿಸಿಕೊಕಂಡು ತಾನೂ ಕೂಡ ಮೃತನಾಗಿದ್ದಾನೆ. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here