ತಾಲಿಬಾನ್ ಉಗ್ರರ ಪಿತಾಮಹನ ಎದೆ ಸೀಳಿ ಹತ್ಯೆ

0
340
ಇಸ್ಲಾಮಾಬಾದ್​: 
          ವಿಶ್ವದ ನಿದ್ದೆ ಕೆಡಿಸಿದ್ದ ಉಗ್ರ ಸಂಘಟನೆ ತಾಲಿಬಾನ್​​ ಹುಟ್ಟುಹಾಕಿ ವಿಶ್ವದದಲ್ಲಿ ಸಾವಿರಾರು ಜನರ ಮಾಟಣಹೋಮಕ್ಕೆ ಕಾರಣನಾಗಿದ್ದ ಪಾಕಿಸ್ತಾನದ ಉಗ್ರ ಮೌಲಾನಾ ಸಮೀ-ಉಲ್​​ ಹಕ್ ನನ್ನು ಅಪರಿಚಿತರ ಗುಂಪೊಂದು ಅವನದೇ ಮನೆಯಲ್ಲಿ ಚಾಕುವಿನಿಂದ ಇರಿದು ಕೊಂದ ಘಟನೆ ವರದಿಯಾಗಿದೆ ಈ ಹತ್ಯೆಯಿಂದ ಉಗ್ರವಾದಕ್ಕೆ ತೀವ್ರ ಹೊಡೆತ ಬಿದ್ದಿರುವುದಂತು ನಿಜ ಮತ್ತು ಅಕ್ಕ ಪಕ್ಕದ ರಾಷ್ಟ್ರಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿರುವುದಂತು ನಿಜ .
        ಈತನನ್ನು ತಾಲಿಬಾನ್ ಉಗ್ರರು ಪಿತಾಮಹ ಎಂದೇ ಕರೆಯುತ್ತಿದ್ದರು ಪಾಕಿಸ್ತಾನದಲ್ಲಿ ಈತ ಒಬ್ಬ ಧಾರ್ಮಿಕ ಗುರುವಾಗಿ ಹಾಗೂ ಮಾಜಿ ಸೆನೇಟರ್​​ ಆಗಿ ಮೌಲಾನಾ ಸಮೀ-ಉಲ್​​ ಹಕ್ ಸೇವೆ ಸಲ್ಲಿಸಿದ್ದ ಎಂದು ತಿಳಿದು ಬಂದಿದೆ ಆದರೆ ಇಷ್ಟು ದಿನ ಬೇರೆಯವರ ಸಾವಿನಲ್ಲಿ ಆನಂದ ಕಂಡ ಉಗ್ರನನ್ನು ಆತನ ಮನೆಯಲ್ಲೇ ಚಾಕುವಿನಿಂದ ಆತನ ಎದೆಯ ಭಾಗಕ್ಕೆ ಇರಿದು ಕೊಲೆ ಮಾಡಲಾಗಿದೆ. ಸಮೀ ಉಲ್​ ಹಕ್​ ಪುತ್ರ ಹಮೀದ್​​-ಉಲ್​-ಹಕ್​​ ತಂದೆಯ ಕೊಲೆಯ ಬಗ್ಗೆ ದೃಢಪಡಿಸಿದ್ದು, ರಾವಲ್ಪಿಂಡಿಯಲ್ಲಿರುವ ಸಮೀ ಉಲ್​​-ಹಕ್​​ ಮನೆಯಲ್ಲಿ ಈ ಘಟನೆ ನಡೆದಿದೆ ಎಂದು ಪಾಕಿಸ್ತಾನ ಸುದ್ದಿ ಸಂಸ್ಥೆ ಅಲ್ ಜಜೀರಾ ವರದಿ ಮಾಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here