ಅಮೇರಿಕ ಅಧ್ಯಕ್ಷರ ಜೊತೆ ಭಾರತದ ಪ್ರಧಾನಿ ಮಾತುಕತೆ

0
34

ವಾಷಿಂಗ್ಟನ್: 

      ಅಮೇರಿಕಾಕ್ಕೆ ನಮ್ಮ ದೇಶದಿಂದ ರಪ್ತಾಗುವ ಉತ್ಪನ್ನಗಳ ಮೇಲೆ ಅಮೇರಿಕಾ ಇಲ್ಲಿಯವರೆಗೆ ತೆರಿಗೆ ವಿನಾಯಿತಿ ನೀಡಿ ಪ್ರೋತ್ಸಾಹ ನೀಡಿತ್ತು ಆದರೆ ರಷ್ಯಾದೊಂದಿಗಿನ ಮಿಲಿಟರಿ ವ್ಯವಹಾರದ ನಂತರ ಆ ಎಲ್ಲಾ  ವಿನಾಯಿತಿಗಳನ್ನು ರದ್ಧು ಮಾಡಿ ಭಾರಿ ಮೊತ್ತದ ತೆರಿಗೆ ಕಟ್ಟುವಂತೆ ತಾಕಿತು ಮಾಡಿತ್ತು ಇದರಿಂದಾಗಿ ಭಾರತದ ರಫ್ತಾಗಿ ತೀವ್ರ ಹೋಡೆತ ಬಿದ್ದಿತ್ತು ಈಗ  50ಕ್ಕೂ ಹೆಚ್ಚು ಉತ್ಪನ್ನಗಳ ಮೇಲಿನ ತೆರಿಗೆ ವಿನಾಯ್ತಿ ರದ್ದು ಮಾಡಿ ಅಮೆರಿಕಾ ಆಘಾತ ಕೊಟ್ಟ ಬೆನ್ನಲ್ಲೇ.

      ಅಧ್ಯಕ್ಷ ಟ್ರಂಪ್ ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತುಕತೆ ನಡೆಸಿದ್ದು ಎರಡೂ ದೇಶಗಳ ನಡುವಿನ ವ್ಯಾಪಾರ ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ಅಮೆರಿಕಾ ಶ್ವೇತಭವನ ನಿನ್ನೆ ದೃಢಪಡಿಸಿದೆ. ಇದರಿಂದ ಭಾರತದ ಉದ್ಯಮ ಕ್ಷೇತ್ರದ ಪಾಲಿಗೆ ಇನ್ನೂ ಆಶಾವಾದ ಉಳಿದುಕೊಂಡಿದೆ.

     ನಾವು(ಭಾರತ ಮತ್ತು ಅಮೆರಿಕಾ) ಮಾತುಕತೆ ನಡೆಸುತ್ತಿದ್ದೇವೆ. ಅತಿ ಉನ್ನತ ಮೌಲ್ಯ ನೀಡುವ ದೇಶಗಳಲ್ಲಿ ಭಾರತ ನಮಗೆ ಮುಖ್ಯವಾದುದು. ನಮ್ಮ ಅಧ್ಯಕ್ಷರು ಭಾರತದ ಪ್ರಧಾನಿ ಜೊತೆ ಮಾತುಕತೆ ನಡೆಸಿದ್ದಾರೆ. ಇನ್ನೂ ಮಾತುಕತೆ ಹಂತದಲ್ಲಿದ್ದೇವೆ ಎಂದು ಶ್ವೇತ ಭವನದ ಮುಖ್ಯ ಆರ್ಥಿಕ ಸಲಹೆಗಾರ ಲಾರ್ರಿ ಕುಡ್ಲೊ ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here