ಅಕಾಲಿಕ ಮಳೆಗೆ 36 ಬಲಿ : ಕೇಂದ್ರದಿಂದ 2 ಲಕ್ಷ ಪರಿಹಾರ!

0
22

ನವದೆಹಲಿ: 

      ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್​ ಹಾಗೂ ಮಹಾರಾಷ್ಟ್ರ ನಾಲ್ಕು ರಾಜ್ಯಗಳಲ್ಲಿ ಮಂಗಳವಾರ ಅಬ್ಬರಿಸಿದ ಗುಡುಗು-ಮಿಂಚು ಸಹಿತ ಗಾಳಿ-ಮಳೆಗೆ ಸುಮಾರು 34 ಮಂದಿ ಅಸುನೀಗಿದ್ದು, ಮೃತರ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ನೆರವು ಘೋಷಿಸಿದ್ದಾರೆ.

ಗುಜರಾತ್ : ಅಕಾಲಿಕ ಮಳೆಗೆ 36 ಸಾವು..!!

     ಅಕಾಲಿಕ ಮಳೆ ಹಾಗೂ ಚಂಡಮಾರುತಕ್ಕೆ ತತ್ತರಿಸಿ ಪ್ರಾಣ ಕಳೆದುಕೊಂಡ ಸಂತ್ರಸ್ತ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮೂಲಕ ಸಂತಾಪ ಸೂಚಿಸಿದ್ದು, ಹಾನಿಯಿಂದಾಗಿ ಜೀವ ಕಳೆದುಕೊಂಡ ಕುಟುಂಬಕ್ಕೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ತಲಾ 2 ಲಕ್ಷ ಪರಿಹಾರವನ್ನು ಘೋಷಿಸಿದ್ದಾರೆ. ಅಲ್ಲದೇ ಗಾಯಗೊಂಡರವರ ಕುಟುಂಬಕ್ಕೆ ತಲಾ 50 ಸಾವಿರ ಪರಿಹಾರ ನೀಡಲಾಗುವುದು ಎಂದು ಟ್ವೀಟ್​ ಮಾಡಿದ್ದಾರೆ. 

      ಮಂಗಳವಾರ ರಾತ್ರಿ ಸುರಿದ ಆಲಿಕಲ್ಲು ಮಳೆಗೆ ಗುಜರಾತ್​​ನಲ್ಲಿ 9 ಮಂದಿ, , ರಾಜಸ್ಥಾನದಲ್ಲಿ 6, ಮಧ್ಯಪ್ರದೇಶದಲ್ಲಿ 16 ಜನ ಪ್ರಾಣಕಳೆದುಕೊಂಡಿದ್ದಾರೆ. ಮಧ್ಯಪ್ರದೇಶದಲ್ಲಿ 11 ಮಂದಿ ಮೃತಪಟ್ಟಿದ್ದಾರೆ. ರಾಜಸ್ತಾನದಲ್ಲಿ ಆಲಿಕಲ್ಲು ಮಳೆಗೆ 300 ಹಳ್ಳಿಗಳಿಗೆ ತೊಂದರೆ ಉಂಟಾಗಿದೆ. 

       ಮೇ ತಿಂಗಳ ಅಂತ್ಯಕ್ಕೆ ಭಾರತದಲ್ಲಿ ಮುಂಗಾರು ಮಳೆ ಆರಂಭವಾಗುವ ನಿರೀಕ್ಷೆ ಇದೆ. ಭಾರತೀಯ ಹವಾಮಾನ ಇಲಾಖೆ 2019ನೇ ಸಾಲಿನ ಮುಂಗಾರಿನ ಬಗ್ಗೆ ವಿವರಣೆ ನೀಡಿದೆ. ಈ ಬಾರಿಯ ಮುಂಗಾರಿನಲ್ಲಿ ಸಾಮಾನ್ಯ ಮಳೆಯಾಗಲಿದ್ದು, ನೈಋತ್ಯ ಮಾನ್ಸೂನ್ ಮಾರುತಗಳಿಂದಲೂ ಸಾಮಾನ್ಯ ಮಳೆಯಾಗಲಿದೆ ಎಂದು ಹೇಳಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

LEAVE A REPLY

Please enter your comment!
Please enter your name here