ಮಾದಕ ವಸ್ತು ಮಾರುತ್ತಿದ್ದ ಇಬ್ಬರನ್ನು ಮಡಿವಾಳ   ಪೊಲೀಸರು ಬಂಧಿಸಿದ್ದಾರೆ

ಬೆಂಗಳೂರು,: 

  ಕಾಲೇಜು ವಿದ್ಯಾರ್ಥಿಗಳಿಗೆ ಐಟಿಬಿಟಿ ಉದ್ಯೋಗಿಗಳಿಗೆ ಮಾದಕ ವಸ್ತು ಬ್ರೌಶುಗರ್ ಅಪೀಮು ಮಾರಾಟಮಾಡುತ್ತಿದ್ದ ರೌಡಿ ಮುದಷಿರ್ ಸೇರಿ ಇಬ್ಬರನ್ನು ಮಡಿವಾಳ   ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

   ಕೆಜಿಹಳ್ಳಿಯ ವಿನೋಬಾ ನಗರ ರೌಡಿ ಮುದಷಿರ್ ಅಲಿಯಾಸ್ ಮುದ್ದು (29), ನೀಲಸಂದ್ರದ ಬಾಲಾವಿಘ್ನೇಶ್ ಅಲಿಯಾಸ್ ಬಾಲ (27)ನನ್ನು ಬಂಧಿಸಿ 14 ಗ್ರಾಂ ಬ್ರೌನ್ ಶುಗರ್, 8 ಗ್ರಾಂ ಅಪೀಮು, 1950 ನಗದು, 2 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಮಾದಕ ವಸ್ತುವನ್ನು ಕಾಲೇಜು ವಿದ್ಯಾರ್ಥಿಗಳು ಹಾಗೂ ಐಟಿಬಿಟಿ ಕಂಪನಿಯ ಉದ್ಯೋಗಿಗಳಿಗೆ 3 ರಿಂದ 4 ಸಾವಿರ ರೂ.ಗಳಿಗೆ ಗ್ರಾಮನಂತೆ ಮಾರಾಟ ಮಾಡುತ್ತಿದ್ದರು ಎಂದು ಡಿಸಿಪಿ ಡಾ. ಬೋರಲಿಂಗಯ್ಯ ತಿಳಿಸಿದ್ದಾರೆ.

   ಆರೋಪಿ ಮುದಷಿರ್ ಕೊಲೆ ಯತ್ನ, ಬೆದರಿಕೆ, ಸುಲಿಗೆ, ದರೋಡೆ ಸೇರಿದಂತೆ ಹಲವು ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿದ್ದು, ಈತನನ್ನು ಕಮರ್ಷಿಯಲ್  ಪೊಲೀಸರು ಠಾಣೆಯ ರೌಡಿ ಪಟ್ಟಿಗೆ ಸೇರಿಸಲಾಗಿತ್ತು, ಅಪರಾಧ ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ಜಾಮೀನು ಪಡೆದು ನಂತರ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿರುವುದು ತನಿಖೆಯಲ್ಲಿ ಕಂಡು ಬಂದಿದೆ.

   ರೌಡಿ ಮುದಷಿರ್ ಮತ್ತೊಬ್ಬ ಆರೋಪಿ ಬಾಲ ಜೊತೆ ಸೇರಿಕೊಂಡು ಬೇರೆಡೆಯಿಂದ ಮಾದಕ ವಸ್ತುವನ್ನು ತಂದು ಮಾರಾಟ ಮಾಡಿ ಬೋಜಿನ ನಡೆಸುತ್ತಿದ್ದನು. ಕೋರಮಂಗಲ 1ನೇ ಬ್ಲಾಕ್‍ನ ಕೃಪಾ ನಿಧಿ ಕಾಲೇಜ್ ಬಳಿ ಮಾದಕ ವಸ್ತುವನ್ನು ಆರೋಪಿಗಳು ಮಾರಾಟ ಮಾಡುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿದ ಮಡಿವಾಳ  ಪೊಲೀಸ್   ಇನ್ಸ್‍ಪೆಕ್ಟರ್ ಭರತ್ ಮತ್ತು ಅವರ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.

Recent Articles

spot_img

Related Stories

Share via
Copy link
Powered by Social Snap