ಪುನೀತ್ ರಾಜ್ ಕುಮಾರ್ ನೋಡಿದರೆ ಕಿಚ್ಚ ಸುದೀಪ್ ಗೆ ಹೊಟ್ಟೆ ಕಿಚ್ಚಾಗುತ್ತದಂತೆ!

0
46

ಬೆಂಗಳೂರು :

  ಪುನೀತ್ ಅಭಿನಯದ ನಟಸಾರ್ವಭೌಮ ಟ್ರೈಲರ್ ನಿನ್ನೆ ಬಿಡುಗಡೆಯಾಗಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಆ ಟ್ರೈಲರ್ ಬಿಡುಗಡೆಗೂ ಮೊದಲು ಕಿಚ್ಚ, ಪುನೀತ್ ಮತ್ತು ತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದ್ದರು.
 

  ಇದಕ್ಕೆ ಧನ್ಯವಾದ ಸಲ್ಲಿಸಿದ ಪುನೀತ್ ‘ಪೈಲ್ವಾನ್’ ಟೀಸರ್ ಕೂಡಾ ಅದ್ಭುತವಾಗಿತ್ತು ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕಿಚ್ಚ ಸುದೀಪ್ ತಮಾಷೆ ವಿಚಾರವೊಂದನ್ನು ಹೇಳಿದ್ದಾರೆ. ‘ನನಗೆ ಎರಡು ಆಯ್ಕೆ ಕೊಡಲಾಯ್ತು. ಒಳ್ಳೆ ನಟ ಆಗ್ಬೇಕಾದ್ರೆ ಒಂದೋ ದೇಹ ಹುರಿಮಾಡಿಕೊಳ್ಳಬೇಕು. ಇಲ್ಲದಿದ್ದರೆ ಚೆನ್ನಾಗಿ ಡ್ಯಾನ್ಸ್ ಮಾಡಬೇಕು. ನನ್ನ ಆಯ್ಕೆ ಯಾವುದಾಗಿತ್ತು ಎಂದು ಇಡೀ ಜಗತ್ತಿಗೇ ಗೊತ್ತು ಬಿಡಿ.. ನಾನು ಹಾಗೆ ಜೀವನ ಸುಲಭ ಮಾಡಿಕೊಂಡೆ.

 ನಿಮ್ಮನ್ನು ಡ್ಯಾನ್ಸ್ ಮಾಡುವುದು ನೋಡುವಾಗಲೆಲ್ಲಾ ನನಗೆ ಸಂತೋಷದಿಂದ ಹೊಟ್ಟೆ ಕಿಚ್ಚಾಗುತ್ತದೆ’ ಎಂದು ಸುದೀಪ್ ತಮಾಷೆಯಾಗಿ ಪುನೀತ್ ಬಳಿ ಹೇಳಿಕೊಂಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here