ರಾಜ್ಯದ ರೈತರ ಸಂಕಷ್ಟಗಳಿಗೆ ಸ್ಪಂದಿಸಲು ಬರ ಅಧ್ಯಯನ : ಕೃಷಿ ಸಚಿವ ಶಿವಶಂಕರರೆಡ್ಡಿ!!

ಚಳ್ಳಕೆರೆ :

  ಸ್ತುತ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೈತ ಸಾಲ ಮನ್ನಾ ಮಾಡುವಲ್ಲಿ ಯಶಸ್ಸಿ ಹೆಜ್ಜೆಯನ್ನಿಟ್ಟು, ಈಗಾಗಲೇ ರಾಜ್ಯದ 22 ಲಕ್ಷ ಸಹಕಾರಿ ಕ್ಷೇತ್ರದ ರೈತರ ಸಾಲವನ್ನು ಮನ್ನಾ ಮಾಡಿದ್ದು, ರಾಷ್ಟ್ರೀಕೃತ ಬ್ಯಾಂಕ್‍ಗಳ ರೈತರ ಎರಡು ಲಕ್ಷ ತನಕ ಸಾಲ ಮನ್ನಾ ಮಾಡಲು ಸಿದ್ದತೆಗಳನ್ನು ನಡೆಸಲಾಗಿದೆ ಎಂದು ರಾಜ್ಯ ಕೃಷಿ ಸಚಿವ ಶಿವಶಂಕರರೆಡ್ಡಿ ತಿಳಿಸಿದರು.

  ಅವರು, ಶನಿವಾರ ಸಂಜೆ ಇಲ್ಲಿನ ಹೊಟ್ಟೆಪ್ಪನಹಳ್ಳಿ ಗ್ರಾಮದ ಬಳಿ ರೈತ ಶ್ರೀಕಂಠಪ್ಪನ ಜಮೀನಲ್ಲಿ ಪಶುವೈಧ್ಯ ಇಲಾಖೆಯಿಂದ ಮೇವು ಬಿತ್ತನೆ ಬೀಜ ಬಿತ್ತಿದ್ದು, ಬೆಳೆಯನ್ನು ವೀಕ್ಷಿಸಿ ನಂತರ ಸುದ್ದಗಾರರೊಂದಿಗೆ ಮಾತನಾಡಿ, ರೈತರ ಸಾಲಮನ್ನಾ ವಿಚಾರದಲ್ಲಿ ಯಾವುದೇ ಅನುಮಾನ ಬೇಡವೆಂದರು. ರೈತರ ಬರದ ಪರಿಸ್ಥಿತಿ ಅಧ್ಯಯನಕ್ಕಾಗಿ ಮಾನ್ಯ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳ ಮಾರ್ಗದರ್ಶನದಲ್ಲಿ ಉಪ ಸಂಪುಟ ಸಮಿತಿಯನ್ನು ಅಧ್ಯಯನಕ್ಕಾಗಿ ರಚಿಸಲಾಗಿದ್ದು, ಜಿಲ್ಲೆಯ ಹಿರಿಯೂರು, ಚಳ್ಳಕೆರೆ ಮತ್ತು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಮೀಕ್ಷೆಯನ್ನು ನಡೆಸಲಾಗಿದೆ ಎಂದರು.

  ಜಿಲ್ಲಾ ಉಸ್ತುವಾರಿ, ರಾಜ್ಯ ಕಾರ್ಮಿಕ ಸಚಿವ ಪಿ.ವೆಂಕಟರಮಣಪ್ಪ, ಕೈಗಾರಿಕೆ ಸಚಿವ ಎಸ್.ಆರ್‍ಶ್ರೀನಿವಾಸ್, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ನೇತೃತ್ವದ ತಂಡ ಬರ ಅಧ್ಯಯನ ನಡೆಸಿತು. ಸಂಸದ ಬಿ.ಎನ್.ಚಂದ್ರಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ, ಶಾಸಕ ಟಿ.ರಘುಮೂರ್ತಿ, ವಿಧಾನಸಭಾ ಪರಿಷತ್ ಸದಸ್ಯೆ ಜಯಮ್ಮಬಾಲರಾಜು, ಮಾಜಿ ಶಾಸಕ ಡಿ.ಸುಧಾಕರ, ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಲಕ್ಷ್ಮಣ್ ಕಳ್ಳಣ್ಣನವರ್, ಜಿಲ್ಲಾ ತೋಟಗಾರಿಕೆ ಅಧಿಕಾರಿ ಸವಿತಾ, ಉಪವಿಭಾಗಾಧಿಕಾರಿ ವಿಜಯಕುಮಾರ್, ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ್, ಇಒ ಈಶ್ವರಪ್ರಸಾದ್, ಸಹಾಯಕ ಕೃಷಿ ನಿರ್ದೇಶಕ ಎನ್.ಮಾರುತಿ, ಡಿವೈಎಸ್ಪಿ ಎಸ್.ರೋಷನ್ ಜಮೀರ್, ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ ಮುಂತಾದ ಅಧಿಕಾರಿಗಳು ಬರ ಅಧ್ಯಯನ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು.

  ಪ್ರಾರಂಭದಲ್ಲಿ ತಾಲ್ಲೂಕಿನ ಗಡಿಭಾಗದ ಹೆಗ್ಗೆರೆ ಗ್ರಾಮಕ್ಕೆ ಆಗಮಿಸಿದ ಸಚಿವರ ತಂಡ ಗ್ರಾಮದ ಗೌರಮ್ಮ ಕೋ ಕುರಿ ವೀರಣ್ಣನವರ ರಿ ಸರ್ವೆ ನಂ. 25/2ರ ಕಡ್ಲೆ ಬೆಳೆಯನ್ನು ವೀಕ್ಷಿಸಿದರು. ಸುಮಾರು 5.25 ಎಕರೆಪ್ರದೇಶದ ಕಡ್ಲೆ ಒಣಗಿತ್ತು. ನಂತರ ಅದೇ ಗ್ರಾಮದ ಸಣ್ಣ ರಂಗಪ್ಪ ರಿ.ಸರ್ವೆ ನಂ.25/1ರ 9. 15 ಎಕರೆ ಪ್ರದೇಶದ ಸೂರ್ಯಕಾಂತಿ ಬೆಳೆಯನ್ನು ವೀಕ್ಷಿಸಿತು, ಅದು ಸಂಪೂರ್ಣ ಒಣಗಿತ್ತು. ನಂತರ ಅದೇ ಗ್ರಾಮದ ಕೆ.ಕರಿಯಣ್ಣನವರ 26/1ರ ಸುಮಾರು ಎರಡು ಎಕರೆ ಪ್ರದೇಶದ ಬಿಳಿಜೋಳ ಒಣಗಿದ್ದನ್ನು ತಂಡ ವೀಕ್ಷಿಸಿತು. ವೀಕ್ಷಣೆ ನಂತರ ಮಾತನಾಡಿದ ಕೃಷಿ ಸಚಿವ ಶಿವಶಂಕರ ರೆಡ್ಡಿ, ಚಳ್ಳಕೆರೆ ತಾಲ್ಲೂಕೂ ಸೇರಿದಂತೆ ಬಹುತೇಕ ಜಿಲ್ಲೆಯ ಇತರೆ ತಾಲ್ಲೂಕುಗಳಲ್ಲಿ ಇದೇ ಪರಿಸ್ಥಿತಿ ಇದೆ ಎಂದರು.

  ರೈತ ಮಂಜುನಾಥನೊಂದಿಗೆ ಚರ್ಚೆ ನಡೆಸಿದ ಕೃಷಿ ಸಚಿವರ ಬಿತ್ತನೆ ಕಾರ್ಯಕ್ಕಾಗಿ ಮಾಡಿರುವ ವೆಚ್ಚದ ಬಗ್ಗೆ ಮಾಹಿತಿ ಪಡೆದರು. ಇತರೆ ರೈತರೊಡನೆ ಸಹ ಕೃಷಿ ಚಟುವಟಿಕೆ ಕುರಿತಂತೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ರೈತರು ಕೃಷಿ ಇಲಾಖೆಯ ಮಾರ್ಗದರ್ಶನಲ್ಲೇ ಬೀಜ, ಗೊಬ್ಬರ, ಮಣ್ಣಿ ಪರೀಕ್ಷೆ, ನೀರಿನ ಗುಣಮಟ್ಟದ ಬಗ್ಗೆ ಸಲಹೆ ಪಡೆದು ವ್ಯವಸಾಯ ನಡೆಸಿರುವುದಾಗಿ ತಿಳಿಸಿದರು. ಮಳೆಯ ಕೊರತೆಯೇ ಬೆಳೆ ಒಣಗಲು ಮೂಲ ಕಾರಣವೆಂದರು. ದಯಮಾಡಿ ನಮಗೆ ಸರ್ಕಾರದಿಂದ ಹೆಚ್ಚಿನ ಪರಿಹಾರವನ್ನು ಕೊಡಿಸಿಕೊಡುವಂತೆ ಮನವಿ ಮಾಡಿದರು. ಬರ ಅಧ್ಯಯನ ತಂಡಕ್ಕೆ ಮನವಿ ಮಾಡಿದ ರೈತರು ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಒಕ್ಕೊರಲ ಬೇಡಿಕೆ ಮಂಡಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap