ಶೃಂಗೇರಿಯ ಶಾರದಾಂಬೆ ಸನ್ನಿಧಿಗೆ ರೈಲು ಸಂಪರ್ಕ ಕಲ್ಪಿಸಲು ಕೇಂದ್ರಕ್ಕೆ ಮನವಿ

0
59
ಚಿಕ್ಕಮಗಳೂರು: 
    ಮಾಜಿ ಪ್ರಧಾನಿ ದೇವೇಗೌಡರು ತಮಗೆ ಒಳ್ಳೆಯದಾಗಲಿ, ಕೆಟ್ಟದಾಗಲಿ ಮೊದಲು ನೆನೆಯೋದೆ ಶೃಂಗೇರಿಯ ಶಾರದಾಂಬೆಯನ್ನು. 1960 ರಿಂದಲೂ ದೊಡ್ಡಗೌಡರು ಶಾರದಾಂಬೆಯ ಪರಮಭಕ್ತರು.
 
ಈ ಇಳಿವಯಸ್ಸಿನಲ್ಲಿಯೂ ಆ ತಾಯಿಯನ್ನು ನೋಡಬೇಕು ಅಂದ್ರೆ ಕಾರ್ ಹತ್ತಿ ಬಂದೇ ಬಿಡ್ತಾರೆ. ದೇವೇಗೌಡರಿಗೆ ಸುಮಾರು ವರ್ಷಗಳಿಂದ ಕಾಡುತ್ತಿರುವ ಒಂದು ವಿಚಾರ ಅಂದ್ರೇ ಶೃಂಗೇರಿಗೆ ರೈಲ್ ತರಬೇಕು ಎಂಬುದು. ಆದ್ರೆ ಆ ಯೋಜನೆ ನೆನೆಗುದಿಗೆ ಬಿದ್ದಿತ್ತು.
ಯೋಜನೆ ನೆನೆಗುದಿಗೆ ಬಿದ್ದಿದೆ ಎಂದು ದೇವೇಗೌಡರು ಕೈಕಟ್ಟಿ ಕುಳಿತುಕೊಳ್ಳಲಿಲ್ಲ. ಮಗ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮೂಲಕ ಈ ಐತಿಹಾಸಿಕ ಯೋಜನೆಯನ್ನ ಮಾಡಿಯೇ ಮಾಡುತ್ತೇನೆ ಎಂದೂ ಹಠ ಹಿಡಿದು ಕುಂತಂತೆ ಕಾಣುತ್ತಿದೆ. ಸಿಎಂ ಕುಮಾರಸ್ವಾಮಿ ಅವರು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್‍ಗೆ ಈ ಕುರಿತು ಪತ್ರವನ್ನು ಬರೆದಿದ್ದಾರೆ
ಕೇಂದ್ರ ರೈಲ್ವೆ ಸಚಿವರಿಗೆ ಪತ್ರ ಬರೆದಿರೋ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಶಿವಮೊಗ್ಗ, ಶೃಂಗೇರಿ, ಮಂಗಳೂರು ಮಾರ್ಗದ ರೈಲ್ವೆಗೆ ಚಾಲನೆ ಕೊಡಬೇಕು ಎಂದೂ ಮನವಿ ಮಾಡಿದ್ದಾರೆ. ಶೃಂಗೇರಿಗೆ ದಿನನಿತ್ಯ ಸಾವಿರಾರು ಭಕ್ತರು ಭೇಟಿ ಕೊಡುವುದರಿಂದ ರೈಲ್ವೆ ಸಂಪರ್ಕ ಕಲ್ಪಿಸಿದ್ರೆ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಮನವಿ ಮಾಡಿದ್ದಾರೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

LEAVE A REPLY

Please enter your comment!
Please enter your name here