ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷರಾಗಿ ಆಗಮಿಸಿದ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ

0
17

ಚಳ್ಳಕೆರೆ  :

   ರಾಜ್ಯದ ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಡ ಶಾಸಕ ಟಿ.ರಘುಮೂರ್ತಿ ನಿಗಮದ ಅಧ್ಯಕ್ಷರಾಗಿ ಶನಿವಾರ ಚಳ್ಳಕೆರೆ ನಗರಕ್ಕೆ ಭೇಟಿ ನೀಡಿದಾಗ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಪಟಾಕಿಸಿ ಸಿಡಿಸಿ ಸಂತಸ ಪಟ್ಟು, ಪುಪ್ಪಹಾರಗಳನ್ನು ಹಾಕಿ ಸ್ವಾಗತ ಬಯಸಿದರು.

    ತಾಲ್ಲೂಕಿನ ಗಡಿಭಾಗದಲ್ಲಿರುವ ಹೆಗ್ಗೆರೆ ಮತ್ತು ಸಾಣೀಕೆರೆ ಗ್ರಾಮಗಳಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಶಾಸಕರಿಗೆ ಅಲ್ಲಿಯೇ ಗ್ರಾಮದ ಪರವಾಗಿ ಪುಪ್ಪಹಾರ ಅರ್ಪಿಸಿ ಸ್ವಾಗತಕೋರಿದರು. ನಂತರ ನೆಹರೂ ಸರ್ಕಲ್‍ಗೆ ಆಗಮಿಸಿದ ಶಾಸಕರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಅಲ್ಲಿಂದ ನೇರವಾಗಿ ವಾಲ್ಮೀಕಿ ವೃತ್ತಕ್ಕೆ ಆಗಮಿಸಿದಾಗ ನೆರೆದಿದ್ದ ನೂರಾರು ಜನರು ಪಟಾಕಿಸಿ ಸಿಡಿಸಿ ಸ್ವಾಗತಿಸಿದರು. ಶ್ರೀವಾಲ್ಮೀಕಿ ಪ್ರತಿಮೆಗೆ ನಮಿಸಿದ ಶಾಸಕರು ನೇರವಾಗಿ ಕಾಲು ನಡಿಗೆಯಲ್ಲೇ ಇಲ್ಲಿನ ಶಾಸಕರ ಭವನಕ್ಕೆ ತೆರಳಿದರು.

     ಶಾಸಕರ ಭವನದಲ್ಲಿ ವೀರಶೈವ ಸಮಾಜದ ಹಿರಿಯ ಮುಖಂಡ, ಹಿರಿಯ ವಾಣಿಜ್ಯೋದ್ಯಮಿ ಬಿ.ಕೆ.ರಾಜಶೇಖರಪ್ಪ ಹಾಗೂ ವೀರಶೈವ ಸಮುದಾಯದ ಮುಖಂಡರು ಪುಪ್ಪಹಾರ ಅರ್ಪಿಸಿ ನಿಗಮದ ಅಧ್ಯಕ್ಷರಾಗಿ ಯಶಸ್ಸಿಯಾಗಿ ಕಾರ್ಯನಿರ್ವಹಿಸುವಂತೆ ಶುಭ ಹಾರೈಸಿದರು. ತಹಶೀಲ್ದಾರ್ ಎಂ.ಮಲ್ಲಿಕಾರ್ಜುನಪ್ಪ, ಕಾರ್ಯನಿರ್ವಹಣಾಧಿಕಾರಿ ಬಿ.ಎಲ್.ಈಶ್ವರಪ್ರಸಾದ್, ಡಿವೈಎಸ್ಪಿ ಎಸ್.ರೋಷನ್ ಜಮೀರ್, ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಜಿ.ವೀರೇಶ್, ಆಂಜನೇಯ, ನಗರಸಭಾ ಸದಸ್ಯರಾದ ಬಿ.ಟಿ.ರಮೇಶ್‍ಗೌಡ, ಜಯಲಕ್ಷ್ಮಿಕೃಷ್ಣಪ್ಪ, ಸುಮಕ್ಕ ಆಂಜನೇಯ, ಸುಮಾಭರಮಣ್ಣ, ಕವಿತಾವೀರೇಶ್, ವೈ.ಪ್ರಕಾಶ್, ಟಿ.ಮಲ್ಲಿಕಾರ್ಜುನ, ವಿಶ್ವಕರ್ಮ ಸಮಾಜದ ಅಧ್ಯಕ್ಷ ವೆಂಕಟೇಶ್‍ಚಾರ್, ಜಯವೀರಚಾರ್, ಆರ್.ಪ್ರಸನ್ನಕುಮಾರ್, ಪಿ.ತಿಪ್ಪೇಸ್ವಾಮಿ, ಬಡಗಿಪಾಪಣ್ಣ, ಬಿ.ಸಿ.ಸತೀಶ್‍ಕುಮಾರ್, ಟಿ.ಜೆ.ತಿಪ್ಪೇಸ್ವಾಮಿ, ಹೊಸಮನೆ ಸ್ವಾಮಿ, ರಾಹುಲ್ ಯುವ ಬ್ರಿಗೇಡ್ ತಾಲ್ಲೂಕು ಅಧ್ಯಕ್ಷ ಮದಕರಿ ನಗರ ಟಿ.ಭದ್ರಿ, ಟಿ.ರಾಘವೇಂದ್ರ ಮುಂತಾದವರು ಶಾಸಕರನ್ನು ಹಾರ್ಧಿಕವಾಗಿ ಸ್ವಾಗತಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here