‘ಹನಿಟ್ರ್ಯಾಪ್’ ಬಲೆಗೆ ಕೆಡವಿದ ಪಾಕ್ ಮಹಿಳಾ​ ಏಜೆಂಟ್ : ಮಾಹಿತಿ ಹಂಚಿಕೊಂಡ ಯೋಧನ ಬಂಧನ

0
85

ನವದೆಹಲಿ: 
  ಈ ಕಿರುನಗೆಯ ಫೋಟೋಗೆ ಭಾರತದ 50 ಸೈನಿಕರು ಮನಸೋತು, ಹನಿಟ್ರ್ಯಾಪ್​ ಬಲೆಗೆ ಸಿಲುಕಿರುವ ವಿಷಯ ಇಂಟಲಿಜೆನ್ಸ್​ ಏಜೆನ್ಸಿಯಿಂದ ತಿಳಿದುಬಂದಿದೆ. ಈ ಸಂಬಂಧ ಒಬ್ಬ ಸೈನಿಕನನ್ನು ಬಂಧಿಸಲಾಗಿದೆ. 50 ಮಂದಿ ಹನಿಟ್ರ್ಯಾಪ್​ಗೆ ಒಳಗಾಗಿರುವುದು ಭಾರತೀಯ ಸೇನೆಗೆ ಈಗ ದೊಡ್ಡ ತಲೆನೋವಾಗಿದೆ.

   ಸೇನೆಯ ಮಹತ್ವದ ಸೂಕ್ಷ್ಮ ವಿಷಯಗಳನ್ನು ಮತ್ತು ಸೇನಾ ಚಟುವಟಿಕೆ ಸ್ಥಳಗಳ ಚಿತ್ರಗಳನ್ನು ಅನಿಕಾ ಛೋಪ್ರಾ ಜೊತೆಗೆ ಹಂಚಿಕೊಂಡ ಆರೋಪದ ಮೇಲೆ ಸೋಮವೀರ್ ಸಿಂಗ್​ ಎಂಬ ಯೋಧನನ್ನು ಬಂಧಿಸಲಾಗಿದೆ.

 

  ಎರಡು ಸೇನೆಯ ಇಂಟಲಿಜೆನ್ಸಿ ಮತ್ತು ರಾಜಸ್ಥಾನದ ಎಟಿಎಸ್​ ಪ್ರಕಾರ, ಛೋಪ್ರಾ ಪಾಕಿಸ್ತಾನದ ಏಜೆಂಟ್​. ಆಕೆ ಕೇವಲ ಒಬ್ಬ ಸೈನಿಕನನ್ನು ಮಾತ್ರ ಹನಿಟ್ರ್ಯಾಪ್​ಗೆ ಕೆಡವಿಲ್ಲ. ಬದಲಾಗಿ ಹಲವು ಸೈನಿಕರೊಂದಿಗೆ ಸಂಬಂಧ ಸಾಧಿಸಿದ್ದಾಳೆ. ಆದರೆ, ಆಕೆ ಬ್ಲಾಕ್​ಮೇಲ್​ ಮಾಡುವವರೆಗೂ ಛೋಪ್ರಾ ಪೂರ್ವಾಪರ ನನಗೆ ಗೊತ್ತಿರಲಿಲ್ಲ ಎಂದು ಬಂಧಿತ ಸೈನಿಕ ಸಿಂಗ್​ ಹೇಳುತ್ತಿದ್ದಾನೆ.

   ಕಳೆದ ಐದು ತಿಂಗಳುಗಳಿಂದ ಸಿಂಗ್​ಗೆ ಜಮ್ಮುವಿನಿಂದ ನಿರಂತರ ಫೋನ್​ ಕಾಲ್​ಗಳು ಬರುತ್ತಿರುವುದನ್ನು ಗಮನಿಸಿದ ಸೇನೆಯ ಇಂಟಲಿಜೆನ್ಸ್​ ವಿಭಾಗ ಸಿಂಗ್​ ಚಟುವಟಿಕೆ ಮೇಲೆ ನಿಗಾ ಇರಿಸಿತ್ತು. ಆನಂತರ ಆತನ ಫೇಸ್​ಬುಕ್​ ಖಾತೆ ಪರಿಶೀಲಿಸಿದಾಗ ಆತ ಛೋಪ್ರಾ ಎಂಬ ಮಹಿಳೆ ಜೊತೆಗೆ ನಡೆಸಿದ್ದ ಚಾಟಿಂಗ್​ ಗಳನ್ನು ಗಮನಿಸಿ, ಅನಿಕಾ ಬಗ್ಗೆ ತನಿಖೆ ನಡೆಸಿದಾಗ ಆಕೆ ಪಾಕಿಸ್ತಾನದ ಏಜೆಂಟ್ ಎಂಬುದು ತಿಳಿದುಬಂದಿತು.
  

ಆರಂಭದಲ್ಲಿ ಸಿಂಗ್​ ಜೊತೆಗೆ ಮುಗ್ಧತೆಯಿಂದ ಮಾತನಾಡಿದ ಅನಿಕಾ, ಆತನ ವೃತ್ತಿ, ಕೆಲಸ ಮಾಡುವ ಸ್ಥಳ, ಆತನ ಟ್ಯಾಂಕ್​ನ ಚಿತ್ರಗಳು ಹಾಗೂ ಗುಂಡಿನ ಅಭ್ಯಾಸ ಮಾಡುವ ಸ್ಥಳಗಳ ಚಿತ್ರಗಳನ್ನು ಕಳುಹಿಸುವಂತೆ ಕೊರಿಕೊಂಡಿದ್ದಾಳೆ.

ಅವಳ ಮಾತುಗಳಿಗೆ ಮರುಳಾಗಿದ್ದ ಸಿಂಗ್​ ಆಕೆ ಕೇಳಿದ ಎಲ್ಲ ಮಾಹಿತಿ ಹಾಗೂ ಚಿತ್ರಗಳನ್ನು ತೆಗೆದು ಆಕೆಗೆ ಕಳುಹಿಸಿದ್ದಾನೆ. ನಂತರ ಕೆಲ ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಂಡಿದ್ದಾನೆ. ನಂತರ ಅನಿಕಾ ಅವನನ್ನು ಬ್ಲಾಕ್​ಮೇಲ್ ಮಾಡಲು ಆರಂಭಿಸಿದ್ದಾಳೆ. ಇಂಟಲಿಜೆನ್ಸ್​ ಮೂಲಗಳ ಪ್ರಕಾರ, ಆರಂಭದಲ್ಲಿ ಸಿಂಗ್​ ಮಾಹಿತಿ ಬದಲಿಗೆ ಹಣ ಸ್ವೀಕರಿಸಲು ಆರಂಭಿಸಿದ್ದಾನೆ. ಆದರೆ, ಆರಂಭದಿಂದಲೂ ಈವರೆಗೂ ಕೇವಲ 5 ಸಾವಿರ ಮಾತ್ರ ಬದಲಾಗಿದೆ.

ಸೇನೆಯ ಮುಖ್ಯಸ್ಥ ಬಿಪಿನ್ ರಾವತ್​ ಅವರು ಈ ವಿಚಾರವಾಗಿ ಕಳೆದ ವರ್ಷ, ಸಾಮಾಜಿಕ ಜಾಲತಾಣದಲ್ಲಿ ಪುರುಷರು ದೀಪಿಕಾ ಪಡುಕೋನೆ ಮತ್ತು ಪ್ರಿಯಾಂಕಾ ಛೋಪ್ರಾ ಅವರಂತಹ ಸೆಲೆಬ್ರೆಟಿಗಳ ಫೋಟೋಗಳನ್ನು ತಮ್ಮ ಪ್ರೊಫೈಲ್​ ಫೋಟೋಗಳಾಗಿ ಹಾಕಿಕೊಂಡು ಜನರ ಸಂಪರ್ಕ ಸಾಧಿಸುತ್ತಾರೆ ಎಂದು ಹೇಳಿದ್ದರು.

ಛೋಪ್ರಾ ಕೇವಲ ಒಬ್ಬ ಸೈನಿಕನೊಂದಿಗೆ ಮಾತ್ರ ಸಂಪರ್ಕ ಹೊಂದಿಲ್ಲ. ಬದಲಾಗಿದೆ ಇತರೆ ಸುಮಾರು 50 ಸೈನಿಕರೊಂದಿಗೆ ಇದೇ ರೀತಿ ಇದ್ದಾಳೆ ಎಂದು ಹೇಳಲಾಗುತ್ತಿದೆ. ಇಷ್ಟು ಮಂದಿ ಫೇಸ್​ಬುಕ್​ನಲ್ಲಿ ಅವಳ ಫೋಟೋಗೆ ಲೈಕ್​ ಮತ್ತು ಕಾಮೆಂಟ್​ಗಳನ್ನು ಮಾಡಿದ್ದಾರೆ. ಇವರೆಲ್ಲರನ್ನು ರಾಜಸ್ಥಾನದ ಎಸ್​ಟಿಎಫ್​ ಜಂಟಿ ತಂಡ ಮತ್ತು ಸೇನೆಯ ಇಂಟಲಿಜೆನ್ಸಿ ವಿಭಾಗ ಪ್ರಶ್ನೆ ಮಾಡುತ್ತಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

LEAVE A REPLY

Please enter your comment!
Please enter your name here