ಚಂದ್ರನ ಮೇಲೆ ಚಿಗುರಿತು ಹತ್ತಿ!!!

ಬೀಜಿಂಗ್: 

      ಚಂದ್ರನ ಮೇಲ್ಮೈ ನಲ್ಲಿ ಗಿಡವೊಂದನ್ನು ಚಿಗುರಿಸುವಲ್ಲಿ ಚೀನಾ ಯಶಸ್ವಿಯಾಗಿದ್ದು, ಇದರಿಂದಾಗಿ ಮೊದಲ ಬಾರಿಗೆ ಭೂಮಿಯಾಚೆಗೆ ಹಸಿರು ಕುಡಿಯೊಡೆದಂತಾಗಿದೆ.

      ಚೀನಾ ಉಡ್ಡಯನ ಮಾಡಿದ್ದ ನೌಕೆಯೊಳಗೆ ಕಳುಹಿಸಿದ್ದ ಹತ್ತಿ ಬೀಜವು ಚಿಗುರಿದ್ದು, ನೌಕೆಯು ಚಂದ್ರನತ್ತ ಪ್ರಯಾಣ ಬೆಳೆಸಿದಾಗ ಬೀಜದಲ್ಲಿ ಮೊಳಕೆ ಕಾಣಿಸಿಕೊಂಡಿತ್ತು. ಅದು ಚಂದ್ರನ ಅಂಗಳ ಪ್ರವೇಶಿಸಿದ ಬಳಿಕ ಮೊಳಕೆಯಲ್ಲಿ ಹಸಿರು ಎಲೆಗಳ ಚಿಗುರು ಕಂಡುಬಂದಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

       ಇದೇ ತಿಂಗಳ ಆರಂಭದಲ್ಲಿ ಚಂದ್ರನ ಕತ್ತಲು ಭಾಗದಲ್ಲಿ ಲ್ಯಾಂಡ್ ಆಗಿದ್ದ ಚೀನಾದ ಮಹತ್ವಾಕಾಂಕ್ಷಿ ಚಾಂಗ್ ಇ–4ನೌಕೆಯಲ್ಲಿ ಸಸ್ಯ ಬೆಳೆಯುವ ಸವಲತ್ತು ಕಲ್ಪಿಸಲಾಗಿತ್ತು. ಗಾಳಿ, ನೀರು ಹಾಗೂ ಮಣ್ಣು ಇರುವ 7 ಇಂಚಿನ ಡಬ್ಬಿಯೊಂದನ್ನು ತಯಾರಿಸಿ ಅದರಲ್ಲಿ ಹತ್ತಿ, ಆಲೂಗಡ್ಡೆ ಹಾಗೂ ಇತರೆ ಬೀಜಗಳನ್ನು ನೆಡಲಾಗಿತ್ತು. ಭೂಮಿಯ ಉಪಗ್ರಹದ ಮೇಲೆ ತನ್ನ ಗಿಡ ಮೊಳಕೆಯೊಡೆದಿರುವುದರ ಚಿತ್ರವನ್ನು ಚೀನಾ ಬಾಹ್ಯಾಕಾಶ ಸಂಸ್ಥೆ ಅಧಿಕೃತವಾಗಿ ಪ್ರಕಟಿಸಿದೆ.

      ಪ್ರಕೃತಿಗೆ ಸೆಡ್ಡು ಹೊಡೆದು ನಿಸರ್ಗಕ್ಕೆ ಪರ್ಯಾಯವದ ಸೃಷ್ಟಿಯನ್ನು ಕರಗತ ಮಾಡಿಕೊಂಡಿರುವ ಚೀನಾ, ಚಂದ್ರನ ಮೇಲ್ಮೈ ಮೇಲೆ ಮಾನವರು ಮಾಡಿದ ಮೊದಲ ಜೈವಿಕ ಬೆಳವಣಿಗೆ ಪ್ರಯೋಗ ಇದು ಎಂದು ಚಾಂಗ್‌ಕ್ವಿಂಗ್ ವಿಶ್ವವಿದ್ಯಾಲಯದ ಕ್ಸಿ ಜೆನ್‌ಕ್ಸಿಂಗ್ ಅವರು ಹೇಳಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

      

Recent Articles

spot_img

Related Stories

Share via
Copy link
Powered by Social Snap