ಆರೋಗ್ಯ ಸಹಾಯಕಿಯರಿಗೆ ಟ್ಯಾಬ್ ವಿತರಣೆ

0
19

  ಚಿತ್ರದುರ್ಗ :

  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಎನ್.ಹೆಚ್.ಎಮ್. ಕಾರ್ಯಕ್ರಮದಡಿ ಚಿತ್ರದುರ್ಗ ತಾಲ್ಲೂಕಿನ ಎಲ್ಲ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಿಗೆ ಟ್ಯಾಬ್ ವಿತರಣೆ ಮಾಡಲಾಯಿತು.

  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿತ್ರದುರ್ಗ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ ಚಿತ್ರದುರ್ಗ ರವರ ಸಹಯೋಗದೊಂದಿಗೆ ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಿಗೆ ಟ್ಯಾಬ್ ವಿತರಣ ಕಾರ್ಯಕ್ರಮವನ್ನು ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ ಚಿತ್ರದುರ್ಗರವರ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.

  ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸಿ.ಎಲ್. ಪಾಲಾಕ್ಷಾ ಅವರು ಮಾತನಾಡಿ, ತಾಲ್ಲೂಕು ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಿಗೆ ತಾಯಿ ಮಕ್ಕಳ ಆರೋಗ್ಯ ಸೇವಾ ದಾಖಲಾತಿಗಳ ಗಣಕೀಕರಣಕ್ಕಾಗಿ ಸರ್ಕಾರದ ವತಿಯಿಂದ ಹೊಸ ಟ್ಯಾಬ್‍ಗಳನ್ನು ನೀಡಲಾಗಿದೆ. ಇನ್ನುಮುಂದೆ ತಾಯಿ ಮಕ್ಕಳ ಆರೋಗ್ಯ ಸೇವೆಗಳನ್ನು ಗಣಕೀಕೃತ ಗೊಳಿಸಬೇಕು. ಈ ನಿಟ್ಟಿನಲ್ಲಿ ಎನ್.ಹೆಚ್.ಮ್. ವತಿಯಿಂದ ತಾಯಿ ಮಕ್ಕಳ ಸೇವೆ ಒದಗಿಸುವ ಎಲ್ಲಾ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಿಗೆ ಟ್ಯಾಬ್ ವಿತರಿಸುತ್ತಿದ್ದೇವೆ ತಾಯಿ ಮಕ್ಕಳಿಗೆ ಸಂಬಂಧಿಸಿದ ಅರ್ಹದಂಪತಿ ದಾಖಲಾತಿ, ಗರ್ಭಿಣಿ ದಾಖಲಾತಿ, ಬಾಣಂತಿ ದಾಖಲಾತಿ ಮತ್ತು ಮಕ್ಕಳ ದಾಖಲಾತಿಗಳನ್ನು ಗಣಕೀಕರಣಗೊಳಿಸುವ ಜವಾಬ್ದಾರಿಯನ್ನು ವಹಿಸಲಾಗಿದೆ ಎಂದರು.

  ಜಿಲ್ಲಾ ಸಂಯೋಜಕ ಕುಮಾರ್.ಎಂ.ಐ.ಎಸ್. ಮಾತನಾಡಿ, ಟ್ಯಾಬ್ ಬಳಕೆ ಕುರಿತು ಈಗಾಗಲೆ ತರಬೇತಿ ನೀಡಲಾಗಿದೆ. ಗಣಕೀಕರಣದ ತರಬೇತಿಯನ್ನು ಶೀಘ್ರವೇ ನೀಡಲಾಗುವುದು ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ತಾಯಿ ಮಕ್ಕಳ ದಾಖಲಾತಿ ಗಣಕೀಕರಣ ಇ-ಆಡಳಿತ ಸೇವೆಯ ಭಾಗವಾಗಿದ್ದು, ತಾಯಿ ಮಕ್ಕಳ ಸಂಪೂರ್ಣ ಮಾಹಿತಿ , ಕಾರ್ಯಯೋಜನೆ, ನಿಗದಿತ ಅರ್ಹದಂಪತಿ, ಗರ್ಭಿಣಿಯ ನೋಂದಾವಣಿ ಸಂಖ್ಯೆ ಕಾಲ ಕಾಲಕ್ಕೆ ಒದಗಿಸಬೇಕಾದ ಸೇವಾ ವಿವರ,

  ಮಕ್ಕಳ ಲಸಿಕಾ ವೇಳ ಪಟ್ಟಿ ಇನ್ನಿತರ ಆಡಳಿತಾತ್ಮಕ ಮತ್ತು ಸೇವಾತ್ಮಕ ದತ್ತಾಂಶಗಳ ಕ್ರೋಡಿಕರಣಕ್ಕೆ ಇಲಾಖೆಯ ಯೋಜನೆಗಳ ಅನುಷ್ಠಾನಕ್ಕೆ ಸಹಕಾರಿಯಾಗಿದೆ ಈಗ ಚಾಲ್ತಿಯಲ್ಲಿರುವ ಹೆಚ್.ಐ.ಎಂ.ಎಸ್., ಎಂ.ಸಿ.ಟಿ.ಎಸ್. ಜಾಲಗಳ ದತ್ತಾಂಶಗಳನ್ನು ಒಗ್ಗೂಡಿಸಿ, ತಾಯಿ ಮಕ್ಕಳ ಮಾಹಿತಿ ಕಣಜದಂತೆ ಆರ್.ಸಿ.ಹೆಚ್.ಪೋರ್ಟಲ್ ಕೆಲಸ ನಿರ್ವಹಿಸುತ್ತದೆ. ಇದರಿಂದ ಆರೋಗ್ಯ ಸಹಾಯಕಿಯರಿಗೆ ಭೌತಿಕ ದಾಖಲಾತಿ ನಿರ್ವಹಣೆ ಹೊರೆಯನ್ನು ಕಡಿಮೆ ಮಾಡಿ, ತ್ವರಿತವಾಗಿ ಅಗತ್ಯ ಸೇವೆ ಒದಗಿಸಲು ಸಹಕರಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕಿನ 22 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಕ್ಷೇತ್ರ ಮಟ್ಟದ ಆರೋಗ್ಯ ಸಹಾಯಕಿಯರು ಪಾಲ್ಗೊಂಡಿದ್ದರು ತಾಲ್ಲೂಕು ಮ್ಯಾನೇಜರ್ ಅಲಿ, ನಾಗಮಣಿ ಮತ್ತು ಅನ್ಸಾರಿ ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here