ಸುಸಜ್ಜಿತ ರಸ್ತೆಯನ್ನು ಕಿತ್ತುಹಾಕಿ ಹೊಸ ರಸ್ತೆ ಮಾಡುತ್ತಾರೆ ಅಂದರೆ ಅವರಿಗೆ ಏನು ಹೇಳ ಬೇಕು ಅಲ್ವಾ.?

ಹಾವೇರಿ ನ್ಯೂಸ್  :

     ರೆಸ್ತೆ ಕೆಟ್ಟು ಹೋದಾಗ ಹೊಸದಾಗಿ ರಸ್ತೆ ಮಾಡೋದನ್ನು ನಾವೆಲ್ಲ ನೋಡಿದ್ದೇವೆ. ಸುಸಜ್ಜಿತ ರಸ್ತೆಯನ್ನು ಕಿತ್ತುಹಾಕಿ ಹೊಸ ರಸ್ತೆ ಮಾಡುತ್ತಾರೆ ಅಂದರೆ ಅವರಿಗೆ ಏನು ಹೇಳ ಬೇಕು ಅಲ್ವಾ.? ಹಾವೇರಿ ನಗರದಲ್ಲೀಗ ಇಂಥಾದ್ದೊಂದು ಕೆಲಸ ಶುರುವಾಗಿದೆ. ಲಕ್ಷ ಲಕ್ಷ ಖರ್ಚು ಮಾಡಿ ಕೆಲವು ತಿಂಗಳ ಹಿಂದೆ ನಗರಸಭೆ ಸುಂದರ ರಸ್ತೆ ನಿರ್ಮಿಸಿತ್ತು. ಆದರೆ ಈಗ ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಅನ್ನೋ ಹಾಗೆ ನಗರಸಭೆ ಇದ್ದ ರಸ್ತೆ ಕಿತ್ತು ಮತ್ತೆ ರಸ್ತೆ ಮಾಡಲಾಗುತ್ತಿದೆ.

   ನಗರದ ಬಸವೇಶ್ವರ ನಗರದಲ್ಲಿ ಕಂಡು ಬರುತ್ತಿರುವ ಈ ಹಿಂದೆ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತು. ಆಗ ನಗರದಲ್ಲಿ ಸುಸಜ್ಜಿತ ರಸ್ತೆ, ಚರಂಡಿ, ಒಳಚರಂಡಿ ಸೇರಿದಂತೆ ಬಹುತೇಕ ಕಾಮಗಾರಿಗಳು ಭರದಿಂದ ನಡೆದಿದ್ದವು. ಬಸವೇಶ್ವರ ನಗರದಲ್ಲೂ ಲಕ್ಷ ಲಕ್ಷ ಹಣವನ್ನ ಖರ್ಚು ಮಾಡಿ ಸುಸಜ್ಜಿತ ರಸ್ತೆ ನಿರ್ಮಿಸಿದ್ದರು.. ಪುಟ್ ಪಾತ್ ನಿರ್ಮಾಣದ ಕಾಮಗಾರಿಯೂ ಮುಕ್ತಾಯದ ಹಂತಕ್ಕೆ ತಲುಪಿದೆ.

   ಹೀಗಿದ್ದರೂ ಈಗ ಮತ್ತೆ ನಗರಸಭೆ ಅಧಿಕಾರಿಗಳು ಸುಸಜ್ಜಿತ ರಸ್ತೆ ಕಿತ್ತು ಹಾಕಿ ಹೊಸ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಸುಂದರ ಮತ್ತು ಸುಸಜ್ಜಿತವಾಗಿರುವ ಕಾಂಕ್ರೀಟ್ ರೋಡನ್ನು ಜೆಸಿಬಿಯಿಂದ ಕಿತ್ತು ಹಾಕಿ ಮತ್ತೊಮ್ಮೆ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಎರಡು ದಿನಗಳಿಂದ ಇರುವ ರಸ್ತೆ ಕಿತ್ತು ಹಾಕಿ ಹೊಸದಾಗಿ ರಸ್ತೆ ಮಾಡ್ತಿದ್ದಾರೆ. ಜನರ ದುಡ್ಡನ್ನು ಈ ರೀತಿ ಹಾಳು ಮಾಡ್ತಿರೋದು ಯಾರ ಪುರುಷಾರ್ಥಕ್ಕೆ ಅನ್ನುವ ಪ್ರಶ್ನೆ ಜನರಲ್ಲಿ ಮನೆಯ ಮಾತಾಗಿದೆ.

   ಇಷ್ಟಕ್ಕೂ ನಗರದ ಕೆಲವು ಕಡೆಗಳಲ್ಲಿ ಇಂದಿಗೂ ಸುಸಜ್ಜಿತ ರಸ್ತೆ ನಿರ್ಮಾಣ ಆಗಿಲ್ಲ. ಜನರು ಬುಳ್ಳುವ, ಸರ್ಕಸ್ ಮಾಡುತ್ತಾ ಕಿತ್ತು ಹೋದ ರಸ್ತೆಯಲ್ಲೇ ಓಡಾಡ್ತಾರೆ. ರಸ್ತೆ ನಿರ್ಮಿಸಿಕೊಡಿ ಅಂತಾ ಜನರು ಮನವಿಗಳ ಮೇಲೆ ಮನವಿ ಮಾಡಿದರೂ ನಗರಸಭೆ ಅಧಿಕಾರಿಗಳು ಕ್ಯಾರೇ ಅಂದಿಲ್ಲ. ಅಂಥಾದರಲ್ಲಿ ಈಗ ಜನರಿಗೆ ಓಡಾಡೋಕೆ ಇರೋ ಸುಂದರ ಮತ್ತು ಸುಸಜ್ಜಿತ ರಸ್ತೆಯನ್ನ ಕಿತ್ತು ಹೊಸ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಸರಕಾರದ ದುಡ್ಡು ಅಂದರೆ ಅದು ಜನರ ದುಡ್ಡು.

    ಜನರ ದುಡ್ಡನ್ನ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಶಾಮೀಲಾಗಿ ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಅಂತಾ ಬೇಕಾಬಿಟ್ಟಿ ಹಣ ಖರ್ಚು ಮಾಡುತ್ತಿದ್ದಾರೆ. ಇನ್ನು ಈ ಪ್ರದೇಶದಲ್ಲಿ ಕಾಂಗ್ರೆಸ್, ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಹಾಗೂ ಸರಕಾರಿ ನೌಕರರು ವಾಸವಾಗಿದ್ದಾರೆ. ವಿವಿಧ ಪಕ್ಷಗಳ ಮುಖಂಡರು ಮತ್ತು ಸ್ಥಳೀಯ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ನಗರಸಭೆ ಅಧಿಕಾರಿಗಳು ಗುಡ್ಡಕ್ಕೆ ಕಲ್ಲೋ ಹೊರೋ ಕೆಲಸ ಮಾಡ್ತಿದ್ದಾರೆ. ಇದು ಜನರ ಕೆಂಗಣ್ಣಿಗೆ ಗುರಿಯಾಗಿದೆ. ರಸ್ತೆ ಇಲ್ಲದ ಕಡೆ ರಸ್ತೆ ಮಾಡಿ ಎಂದು ಸುಸಜ್ಜಿತ ರಸ್ತೆ ವಂಚಿತ ಸ್ಥಳೀಯರು ಆಗ್ರಹ ಮಾಡುತ್ತಿದ್ದಾರೆ.

    ಒಟ್ಟಿನಲ್ಲಿ ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಅನ್ನುವ ಹಾಗೆ ಜನರ ದುಡ್ಡನ್ನು ಬೇಕಾಬಿಟ್ಟಿ ಖರ್ಚು ಮಾಡುತ್ತಿರುವುದು ಪ್ರಜ್ಞಾವಂತರನ್ನು ಕೆರಳಿಸಿದೆ.ನಗರದ ಎಲ್ಲ ಭಾಗದಲ್ಲಿಯೂ ಸರಕಾರದ ಯೋಜನೆ ಸಿಗುವಂತಾಗಲು ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮುಂದಾಗುವುದು ಯಾವಾಗ ?

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap