ಪ್ರಿಯಕರನ ಜೊತೆಗೆ ಪಾರ್ಕ್ ನಲ್ಲಿ ಕುಳಿತಿದ್ದ ಬಾಲಕಿಯ ಮೇಲೆ ಅತ್ಯಾಚಾರ!!

0
57

ಹುಬ್ಬಳ್ಳಿ :

   ಪ್ರಿಯಕರನ ಜೊತೆಗೆ ಏಕಾಂತದಲ್ಲಿ ಕುಳಿತು ಮಾತನಾಡುತ್ತಿದ್ದ 15 ವರ್ಷದ ಬಾಲಕಿಯನ್ನು ಹೆದರಿಸಿ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

  ರೈಲ್ವೇ ಕ್ವಾಟರ್ಸ್ ಸಮೀಪ ಸೆಲ್ಟಮೆಂಟ್ ಪ್ರದೇಶದ ಕಿರಣ್ ಚಂದ್ರಶೇಖರ್ ಗೋಕಾಕ್ (28) ಅತ್ಯಾಚಾರ ಎಸಗಿದ ಕಾಮುಕನಾಗಿದ್ದು, ಅಭಿಷೇಕ್ ಬಳ್ಳಾರಿ (23), ರಾಹುಲಾ ಜಾಧವ್ (33) ಹಾಗೂ ಕನ್ನಯ್ಯ ಕೊರವರ (24) ಆತನಿಗೆ ಸಹಾಯ ಮಾಡಿದ ಆರೋಪಿಗಳು.

   ಬಾಲಕಿ ತನ್ನ ಪ್ರಿಯಕರನ ಜೊತೆ ಹಳೇ ಹುಬ್ಬಳ್ಳಿಯ ಮಂಟೂರು ರಸ್ತೆಯ ಪಾರ್ಕ್ ಒಂದರಲ್ಲಿ ಏಕಾಂತದಲ್ಲಿ ಕುಳಿತು ಮಾತನಾಡುತ್ತಿದ್ದ ವೇಳೆ ಅಲ್ಲಿಗೆ ಬಂದ ಕಿರಣ್ ಚಂದ್ರಶೇಖರ್ ಗೋಕಾಕ್ ತನ್ನ  ಸಹಚರರ ಸಹಾಯದಿಂದ  ಬಾಲಕಿಯನ್ನು ಬೆದರಿಸಿ ಎತ್ತಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

  ಈ ಘಟನೆಯ ಬಗ್ಗೆ ಸಂತ್ರಸ್ತ ಬಾಲಕಿ ತನ್ನ ಪೋಷಕರಿಗೆ ತಿಳಿಸಿದ್ದು,  ಈ ಸಂಬಂಧ ಅತ್ಯಾಚಾರ ಸಂತ್ರಸ್ತ ಬಾಲಕಿಯ ಪೋಷಕರು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here