ಕ್ಯಾಪ್ಟನ್ ಕೊಹ್ಲಿಗೆ 30 ರ ಸಂಭ್ರಮ

0
63

ನವದೆಹಲಿ:

      ವಿಶ್ವ ಕ್ರಿಕೆಟ್‌ನಲ್ಲಿ ಎಲ್ಲರ ಗಮನ ಸೆಳೆಯುತ್ತಿರುವ ಮತ್ತು ಜಗತ್ತಿನ ಖ್ಯಾತ ಕ್ರಿಕೆಟರ್‌ಗಳಿಂದ ಪ್ರಶಂಸೆಗೆ ಪಾತ್ರವಾಗುತ್ತಿರುವ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಸೋಮವಾರ 30ನೇ ಹುಟ್ಟುಹಬ್ಬದ ಸಡಗರ. 

      ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಇಂದಿಗೆ (ನವೆಂಬರ್ 5) 30ರ ಹರೆಯಕ್ಕೆ ಕಾಲಿಡುತ್ತಿದ್ದಾರೆ. ತಮ್ಮ ಹುಟ್ಟುಹಬ್ಬವನ್ನು ಪತ್ನಿ ಅನುಷ್ಕಾ ಶರ್ಮಾ ಅವರ ಜೊತೆ ಕಳೆಯಲಿಚ್ಛಿಸಿರುವ ಕೊಹ್ಲಿ ಆ ಸಲುವಾಗಿ ಹರಿದ್ವಾರಕ್ಕೆ ಆಗಮಿಸಿದ್ದಾರೆ. ಈ ಜೋಡಿ ನವೆಂಬರ್ 7ರ ವರೆಗೂ ಹರಿದ್ವಾರದಲ್ಲಿ ಉಳಿಯಲಿದೆ.

      ದೇಶದ ಅತ್ಯಂತ ಭರವಸೆಯ ಮತ್ತು ಜಾಗತಿಕ ಕ್ರಿಕೆಟ್‌ನಲ್ಲಿ ತನ್ನದೇ ಛಾಪು ಮೂಡಿಸಿರುವ ಕೊಹ್ಲಿಗೆ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. 

      ಎಲ್ಲಾ ಶುಭಾಶಯಗಳ ನಡುವೆ ಹೆಚ್ಚು ಗಮನ ಸೆಳೆಯೋದು ಕೊಹ್ಲಿ ಪತ್ನಿ, ನಟಿ ಅನುಷ್ಕಾ ಶರ್ಮಾ ಅವರ ವಿಷ್. ಟ್ವಿಟರ್ ನಲ್ಲಿ ಹರಿದ್ವಾರ ಬಸದಿಯಲ್ಲಿ ನಿಂತ ಫೋಟೋ ಹಾಕಿರುವ ಅನುಷ್ಕಾ, ‘ನಿನ್ನನ್ನು ಹುಟ್ಟಿಸಿದ ದೇವರಿಗೆ ಥ್ಯಾಂಕ್ಸ್’ ಎಂದು ಅರ್ಥಪೂರ್ಣ ಸಾಲನ್ನು ಬರೆದುಕೊಂಡಿದ್ದಾರೆ. 

 

LEAVE A REPLY

Please enter your comment!
Please enter your name here