ರಾಚೆಲ್ ಹೆಯ್ಹೋ-ಫ್ಲಿಂಟ್, ಐಸಿಸಿ ವರ್ಷದ ಆಟಗಾರ್ತಿ ಪ್ರಶಸ್ತಿ ಸ್ಮೃತಿ ಮಂದಾನಾ ತಮ್ಮದಾಗಿಸಿಕೊಂಡಿದ್ದಾರೆ

0
31
ದುಬೈ:
    ಸ್ಮೃತಿ ಮಂದಾನಾಗೆ ಈ ವರ್ಷದ ಮಹಿಳಾ ಕ್ರಿಕೆಟಿಗ, ವರ್ಷದ ಮಹಿಳಾ ಏಕದಿನ ಆಟಗಾರ್ತಿ ಪ್ರಶಸ್ತಿಗಳು ಸಹ ಲಭ್ಯವಾಗಿವೆ. ಭಾರತೀಯ ಮಹಿಳಾ ಕ್ರಿಕೆಟರ್​ವೊಬ್ಬರಿಗೆ ಇದೇ ಮೊದಲ ಬಾರಿಗೆ ಈ ರೀತಿಯ ಅವಾರ್ಡ್​ ಲಭ್ಯವಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ ಇಂದು ಮಹಿಳಾ ಕ್ರಿಕೆಟ್​ನ ವಾರ್ಷಿಕ ಪ್ರಶಸ್ತಿ ಪ್ರಕಟಿಸಿದೆ.
     ಉಳಿದಂತೆ ಆಸ್ಟ್ರೇಲಿಯಾ ತಂಡದ ವಿಕೆಟ್ ಕೀಪರ್ ಅಲಿಸ್ಸಾ ಹೀಲಿ ಐಸಿಸಿ ಟಿ20 ವರ್ಷದ ಆಟಗಾರ್ತಿ ಪ್ರಶಸ್ತಿ ಮತ್ತು ಇಂಗ್ಲೆಂಡ್ ತಂಡದ ಸೋಫಿ ಎಕ್ಲೆಸ್ಟೋನ್ ಅವರು ಐಸಿಸಿ ಎಮರ್ಜಿಂಗ್ ಪ್ಲೇಯರ್ ಆಫ್ ದಿ ಇಯರ್​ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಸ್ಮೃತಿ ಮಂದಾನಾ ಕ್ರಮವಾಗಿ ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ 669 ಹಾಗೂ 622ರನ್​ಗಳಿಕೆ ಮಾಡಿದ್ದಾರೆ.

ಪ್ರಶಸ್ತಿ ಲಭ್ಯವಾಗುತ್ತಿದ್ದಂತೆ ಮಾತನಾಡಿರುವ ಸ್ಮೃತಿ ಮಂದಾನಾ, ಎಲ್ಲ ಪ್ಲೇಯರ್ಸ್​ ತಂಡದ ಗೆಲುವು ಹಾಗೂ ದೇಶಕ್ಕಾಗಿ ಆಡುತ್ತಾರೆ. ನಮ್ಮ ಶ್ರಮ ಯಸಸ್ಸು ಕಂಡಾಗ ಹಾಗೂ ತಂಡ ಗೆಲುವಿನ ನಗೆ ಬೀರಿದಾಗ ಇಂತಹ ಪ್ರಶಸ್ತಿಗಳು ನಮ್ಮನ್ನ ಆರಿಸಿ ಬಂದರೆ ಖಂಡಿತ ಖುಷಿಯಾಗುತ್ತದೆ ಎಂದಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here