ಕುಮಾರಸ್ವಾಮಿ ಸದ್ದಾಂ ಹುಸೇನ್ ಎಂದ ಬಿ.ಜೆ.ಪಿ ಸಂಸದ!!!?

0
241

ಬೆಳಗಾವಿ:  ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಹೈಜಾಕ್ ಮಾಡಿದ್ದಾರೆ.ರಾಜಕಾರಣದಲ್ಲಿ ಹೈಜಾಕ್ ಮಾಡುವ ವ್ಯವಸ್ಥೆ ನಿಲ್ಲಬೇಕು.

     ಸದ್ದಾಂ ಹುಸೇನ್,ವೀರಪ್ಪನ್ ಬಲಾಢ್ಯ ಆಗಿದರು ಅವರ ಗತಿ ಏನಾಯ್ತು.?. ಕುಮಾರಸ್ವಾಮಿ ಸದ್ದಾಂ ಹುಸೇನ್ ಗಿಂತ  ಕೆಟ್ಟವರು  ಎಂದು  ಬಿಜೆಪಿ ಸಂಸದ ಸುರೇಶ್ ಅಂಗಡಿ ಬೆಳಗಾವಿಯಲ್ಲಿ ವಾಗ್ದಾಳಿ  ನಡೆಸಿದ್ದಾರೆ.

      ಜಮಖಂಡಿಯಲ್ಲಿ ಅನುಕಂಪದ ಆಧಾರದ ಮೇಲೆ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ,ಬಳ್ಳಾರಿಯಲ್ಲಿ ನಮ್ಮ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆದಿದೆ.

    ಯಡಿಯೂರಪ್ಪನವರಿಗೆ ಹಿನ್ನಡೆಯಾಗಿದೆ ಎನ್ನುವ ಪ್ರಶ್ನೆಯೇ ಇಲ್ಲ, ಯಡಿಯೂರಪ್ಪರವರಂತಹ ಜನ ನಾಯಕರು ಯಾರೂ ಇಲ್ಲ.ಸರ್ಕಾರದ ದುಡ್ಡು,ಬಲಾಢ್ಯ ಎರಡು ಪಕ್ಷಗಳು ಒಂದಾಗಿದೆ ಸೋಲಿಗೆ ಕಾರಣ, ಬಿಜೆಪಿ ಸೋಲಿಸಬೇಕೆಂದು ಉದೇಶದಿಂದ ಮೈತ್ರಿ ಮಾಡಿಕೊಂಡಿದೆ.ರಾಜ್ಯದ ಜನರಿಗೆ ಒಳ್ಳೆಯದಾಗಲಿ ಎಂದು ಬಯಸುತ್ತಿಲ್ಲ ಎಂದು ಮೈತ್ರಿ ಸರ್ಕಾರದ ವಿರುದ್ಧ ಸಂಸದ ಸುರೇಶ್ ಅಂಗಡಿ ವಾಗ್ದಾಳಿ  ನಡೆಸಿದ್ದಾರೆ.

 

 

LEAVE A REPLY

Please enter your comment!
Please enter your name here