ವೈಯಕ್ತಿಕ ಕಿತ್ತಾಟ ಆರೋಪಗಳನ್ನು ಬದಿಗಿರಿಸಿ ಅಭಿವೃದ್ಧಿಗೆ ಕೈ ಜೋಡಿಸಿ: ಶಾಸಕ ರಂಗನಾಥ್

ಕುಣಿಗಲ್:

  ಹಲವು ಭರವಸೆಗಳನ್ನು ನೀಡುವ ಮೂಲಕ ಮತದಾರರಿಂದ ಚುನಾಯಿತ ಗೊಂಡು ಪುರಸಭೆಗೆ ಬಂದ ಸದಸ್ಯರು ಬರಿ ವೈಯಕ್ತಿಕ ಕಿತ್ತಾಟ ಮತ್ತು ಆರೋಪಗಳನ್ನು ಮಾಡುತ್ತ ಕಾಲಕಳೆಯುವುದನ್ನು ಬಿಟ್ಟು ಪಟ್ಟಣದ ಅಭಿವೃದ್ಧಿಗಾಗಿ ಒಗ್ಗಟ್ಟಿನಿಂದ ಶ್ರಮಿಸಬೇಕೆಂದು ಶಾಸಕ ಡಾ. ರಂಗನಾಥ್ ಕಿವಿಮಾತು ಹೇಳಿದರು.

 ಪಟ್ಣಣದ ಪುರಸಭಾ ಕಚೇರಿಯಲ್ಲಿ ಕರೆಯಲಾಗಿದ್ದ ವಿಶೇಷ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ಪಟ್ಟಣದ ವಾರ್ಡ್‍ಗಳಲ್ಲಿ ಸಂಚಾರ ಮಾಡುತ್ತಿದ್ದೇನೆ. ಅಲ್ಲಿ ಸ್ವಚ್ಚತೆ ಮರೀಚಿಕೆಯಾಗಿದೆ, ಕೆಲವೆಡೆ ಚರಂಡಿ ಸ್ವಚ್ಚಗೊಳಿಸಿಲ್ಲ , ಕಸ ತೆಗೆಯುತ್ತಿಲ್ಲ ಈ ಸಮಸ್ಯೆ ಬಗ್ಗೆ ಗಮನ ಹರಿಸಿ ಎಂದು ಖುದ್ದು ಶಾಸಕರ ಅನುಭವಕ್ಕೆ ಬಂದ ಸಮಸ್ಯೆಯನ್ನು ಪುರಪಿತೃಗಳಿಗೆ ಎಳೆ ಎಳೆಯಾಗಿ ಬಿಡಿಸಿಟ್ಟ ಪ್ರಸಂಗ ಜರುಗಿತು.
ಇದೇ ಸಂದರ್ಭದಲ್ಲಿ ಸದಸ್ಯರು ಪರಸ್ಪರ ಒಬ್ಬರ ಮೇಲೆ ಒಬ್ಬರು ಆರೋಪ ಮಾಡುತ್ತಿದ್ದಾಗ ಶಾಸಕ ಡಾ.ರಂಗನಾಥ್ ಏರಿದ ಧ್ವನಿಯಲ್ಲಿಯೇ ಮಾತನಾಡಿ ಜನಪ್ರತಿನಿಧಿಗಳಾದ ನೀವು ಜವಾಬ್ದಾರಿಯಿಂದ ನಡೆದುಕೊಳ್ಳುವುದನ್ನು ಕಲಿಯಬೇಕೆಂದು ಕುಟುಕಿದರು.

   ಸಭೆಯಲ್ಲಿ ಹಲವು ಸದಸ್ಯರು ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಶಾಸಕರ ಮುಂದೆ ದೂರಿನ ಸುರಿಮಳೆಗೈದರು. ಸದಸ್ಯರುಗಳ ದೂರು ಮತ್ತು ಆರೋಪಗಳನ್ನ ಕೇಳಿದ ಶಾಸಕ ಡಾ|| ರಂಗನಾಥ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ನಂತರ ಒಳಚರಂಡಿ ಸಂಸ್ಕರಣಾ ಘಟಕ ಪಟ್ಟಣದಲ್ಲಿ ಹೈಟೆಕ್ ಬಸ್ ನಿಲ್ದಾಣ ಹಾಗೂ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಗುಂಪು ಮನೆಗಳ ನಿರ್ಮಿಸಲು ಅನುಮೋದನೆ ಪಡೆದರು. ಹಲವು ವರ್ಷಗಳಿಂದ ಶ್ರೀ ಸಾಮಾನ್ಯರಿಗೆ ಅವಶ್ಯವಿರುವ ಖಾತೆ ಪಹಣಿಗಳನ್ನು ಸರಳೀಕರಣಗೊಳಿಸುವಂತೆ ಮತ್ತು ಅವರಿಗೆ ಸ್ಪಂದಿಸುವಂತೆ ಸೂಚಿಸಿದರು ,

  ಈ ಸಂದರ್ಭದಲ್ಲಿ ಅಧ್ಯಕ್ಷೆ ನಳಿನಾ ಭೈರಪ್ಪ , ಉಪಾಧ್ಯಕ್ಷ ಅರುಣ್‍ಕುಮಾರ್ , ಮುಖ್ಯಾಧಿಕಾರಿ ರಮೇಶ್ , ಸದಸ್ಯರಾದ ಕೆ ಎಲ್ ಹರೀಶ್ , ರಂಗಸ್ವಾಮಿ , ಶಂಕರ್ , ಮಂಜು , ಸೇರಿದಂತೆ ಇತರರು ಇದ್ದರು .

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap