ಭಾರತ್ ಬಂದ್ ಗೆ ಮೈಸೂರು ಅಂಚೆ ನೌಕರರ ಸಹಮತ 

0
29

 

ಮೈಸೂರು :

 ಕೇಂದ್ರ ಕಾರ್ಮಿಕ ಸಂಘಟನೆ ಕರೆ ನೀಡಿರುವ ರಾಷ್ಟ್ರವ್ಯಾಪಿ ಬಂದ್ ಗೆ ಮೈಸೂರು ವಿಭಾಗದ ಅಂಚೆ ನೌಕರರ ಜಂಟಿ ಕ್ರಿಯಾ ಸಮಿತಿ ಬೆಂಬಲಿಸಿ ಪಾಲ್ಗೊಳ್ಳಲಿದೆ. ಇದರಿಂದ ಎರಡು ದಿನಗಳ ಕಾಲ ಅಂಚೆ ಕಚೇರಿಗಳು ಕಾರ್ಯ ನಿರ್ವಹಿಸುವುದಿಲ್ಲ ಎಂದು ವಿಭಾಗದ ಕಾರ್ಯದರ್ಶಿ ಸುಂದರಯ್ಯ ತಿಳಿಸಿದರು.

  ನಾಳೆ ( ಜ. 7 ) ಹಾಗೂ ನಾಡಿದ್ದು (ಜ.9) ನಡೆಯುವ ಪ್ರತಿಭಟನೆಗೆ ಅಖಿಲ ಭಾರತ ಅಂಚೆ ನೌಕರರ ಸಂಘ, ರಾಷ್ಟ್ರೀಯ ಅಂಚೆ ನೌಕರರ ಸಂಘವೂ ಬೆಂಬಲಿಸಿದ್ದು, ಈ ನಿಟ್ಟಿನಲ್ಲಿ ನಾಳೆ ಲಷ್ಕರ್ ಮೊಹಲ್ಲಾದಲ್ಲಿರುವ ಪ್ರಧಾನ ಅಂಚೆ ಕಚೇರಿ ಬಳಿ ಪ್ರತಿಭಟನೆ ನಡೆಸಿ ಅಲ್ಲಿಂದ ಪುರಭವನದವರೆಗೆ ಮೆರವಣಿಗೆ ನಡೆಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here