ದುನಿಯಾ ವಿಜಯ್ ವಿರುದ್ಧ ಚಾರ್ಜ್ ಶೀಟ್!!!

0
24

ಬೆಂಗಳೂರು

        ಇಬ್ಬರು ಹೆಂಡಿರ ಜಗಳ,ಜಿಮ್ ಟ್ರೈನರ್ ಮೇಲೆ ಹಲ್ಲೆ ಇನ್ನಿತರ ಕಾರಣಗಳಿಂದ ಒಂದಲ್ಲ ಒಂದು ಪ್ರಕರಣದ ಸಂಕಷ್ಟ ಎದುರಿಸುತ್ತಿರುವ ದುನಿಯಾವಿಜಿ ಮಹಿಳಾ ಆಯೋಗದಿಂದ ನೋಟೀಸ್ ಜಾರಿಯಾಗಿರುವ ಬೆನ್ನಲ್ಲೇ ನಿರ್ಮಾಪಕ ಸುಂದರ್ ಗೌಡ ರಕ್ಷಣೆಗೆ ನಿಂತಿದ್ದ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಕೆಯಾಗಿ ನ್ಯಾಯಾಲಯಕ್ಕೆ ಅಲೆದಾಡುವ ಅನಿವಾರ್ಯತೆ ಉಂಟಾಗಿದೆ.

       ಪುತ್ರಿ ಮೋನಿಷಾರ ದೂರಿನ ಹಿನ್ನಲೆಯಲ್ಲಿ ನಟ ದುನಿಯಾ ವಿಜಯ್‍ಗೆ ಮಹಿಳಾ ಆಯೋಗ ನೋಟಿಸ್ ನೀಡಿದೆ.ಮಹಿಳಾ ಮತ್ತು ಮಕ್ಕಳ ಆಯೋಗಕ್ಕೆ ಕಳೆದ ಅ.30ರಂದು ಸಲ್ಲಿಸಿದ್ದ ಮೋನಿಷಾರ ದೂರು ಆಧರಿಸಿ ಆಯೋಗ ನ. 12 ಅಥವಾ 13 ರಂದು ಆಯೋಗದ ಮುಂದೆ ಖುದ್ದು ಹಾಜರಾಗುವಂತೆ ನೋಟೀಸ್ ಜಾರಿ ಮಾಡಿದೆ.

       ಈ ವೇಳೆ ಅಪ್ಪ ಮಕ್ಕಳ ಮಧ್ಯೆ ಸಂಧಾನ ನಡೆಸುವ ಸಾಧ್ಯತೆಯಿದ್ದು ವಿಜಿಗೆ ಸಂಕಷ್ಟವಾಗಿಯೂ ಪರಿಣಮಿಸುವ ಸಾಧ್ಯತೆಯೂ ಇದೆ.ಆಯೋಗದ ಮುಂದೆ ಅಪ್ಪ-ಮಗಳು ಇಬ್ಬರು ಹಾಜರಾಗಬೇಕಿದ್ದು ಕೌನ್ಸಿಲಿಂಗ್ ನಡೆಸಲಾಗುತ್ತದೆ. ಒಂದೊಮ್ಮೆ ವಿಜಿ ಮನವೊಲಿಕೆ ವಿಫಲವಾದರೆ ಆಯೋಗ ವಿಜಿ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯೂ ಇದೆ.

       ಇದರೆ ಜೊತೆಗೆ ವಿಜಿ ಮಕ್ಕಳ ಮುಂದಿನ ವಿದ್ಯಾಭ್ಯಾಸ ಹಾಗೂ ಮಕ್ಕಳ ಮುಂದಿನ ಭವಿಷ್ಯಕ್ಕೆ ಆರ್ಥಿಕ ಸಹಾಯ ಯಾವ ರೀತಿ ಇರಲಿದೆ ಎಂಬುವುದರ ಬಗ್ಗೆ ಆಯೋಗ ಪರಾಮರ್ಶಿಸಿ ವಿಜಿ ಕಡೆಯಿಂದ ಲಿಖಿತವಾಗಿ ಬರೆಸಿಕೊಳ್ಳುವ ಸಾಧ್ಯತೆ ಇದೆ.

       ಅ.30 ರಂದು ವಿಜಯ್ ಅವರ ಪುತ್ರಿ ಮೋನಿಷಾ ಮಹಿಳಾ ಆಯೋಗದಲ್ಲಿ ಅಪ್ಪ-ಅಮ್ಮನ ಗಲಾಟೆಯಲ್ಲಿ ನಮಗೆ ತೊಂದರೆಯಾಗುತ್ತಿದೆ. ಆರ್ಥಿಕವಾಗಿಯೂ ಅಪ್ಪನಿಂದ ಸಹಾಯ ಸಿಗುತ್ತಿಲ್ಲ. ಹೀಗಾಗಿ ಕೂಡಲೇ ಆಯೋಗ ಮಧ್ಯಪ್ರವೇಶ ಮಾಡಿ ಇದನ್ನು ಬಗೆಹರಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು.

ಆರೋಪಪಟ್ಟಿ ಸಲ್ಲಿಕೆ

       ಮಾಸ್ತಿಗುಡಿ ಕ್ಲೈಮಾಕ್ಸ್ ಚಿತ್ರೀಕರಣದ ವೇಳೆ ಇಬ್ಬರು ಖಳ ನಟರು ಮೃತಪಟ್ಟ ಪ್ರಕರಣದಲ್ಲಿ ನಿರ್ಮಾಪಕ ಸುಂದರ್ ಗೌಡ ಪೊಲೀಸರು ಬಂಧಿಸಲು ಬಂದಿದ್ದಾಗ ತಪ್ಪಿಸಿಕೊಳ್ಳಲು ನೆರವಾಗಿದ್ದ ಪ್ರಕರಣದಲ್ಲಿ ದುನಿಯಾ ವಿಜಯ್ ಮೇಲೆ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ.

       ರಾಮನಗರ ನ್ಯಾಯಾಲಯದಿಂದ ಬಂಧನ ವಾರೆಂಟ್ ಜಾರಿಯಾಗಿದ್ದ ಹಿನ್ನಲೆಯಲ್ಲಿ ಸುಂದರ್ ಗೌಡನನ್ನು ಬಂಧಿಸಲು ಮೇ ತಿಂಗಳಲ್ಲಿ ಸಿಕೆ ಅಚ್ಚುಕಟ್ಟುವಿನಲ್ಲಿರುವ ಮನೆಗೆ ತಾವರೆಕೆರೆ ಪೊಲೀಸರು ಬಂಧಿಸಲು ಬಂದಿದ್ದಾಗ ಸುಂದರ್ ಗೌಡ ತಪ್ಪಿಸಿಕೊಳ್ಳಲು ದುನಿಯಾ ವಿಜಿ ನೆರವಾಗಿದ್ದರು.

       ಈ ಬಗ್ಗೆ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ತಾವರೆಕೆರೆ ಪೊಲೀಸ್ ಠಾಣೆಯ ಮುಖ್ಯಪೇದೆ ಗೋವಿಂದರಾಜು ನ್ಯಾಯಾಲಯ ಆದೇಶವನ್ನು ಉಲ್ಲಂಘಿಸಿ, ಸರ್ಕಾರಿ ಕೆಲಸಕ್ಕೆ ತಡೆಯೊಡ್ಡಿದ ಆರೋಪದ ಮೇಲೆ ದೂರು ದಾಖಲಿಸಿದ್ದರು.

9 ಮಂದಿ ಸಾಕ್ಷ್ಯ

       ದೂರು ದಾಖಲಾಗುತ್ತಿದ್ದಂತೆ ದುನಿಯಾ ವಿಜಿ ಪರಾರಿಯಾಗಿದ್ದರು.ಬಳಿಕ ಸಬ್‍ಇನ್ಸ್‍ಪೆಕ್ಟರ್ ವಿನಯ್ ಅವರು ಬಂಡೀಪುರ ಟೈಗರ್ ರೆಸಾರ್ಟ್‍ನಲ್ಲಿ ವಿಜಿಯನ್ನು ಪತ್ತೆ ಮಾಡಿದ್ದರು. ಕೂಡಲೇ ಸಿಕೆ ಅಚ್ಚುಕಟ್ಟು ಪೊಲೀಸರು ವಿಜಿಯನ್ನ ಬಂಡೀಪುರದಲ್ಲಿ ಬಂಧಿಸಿ ಕರೆತಂದಿದ್ದರು ಬಳಿಕ ದುನಿಯಾ ವಿಜಿ ಅವರು ಕೋರ್ಟ್‍ನಲ್ಲಿ ಜಾಮೀನು ಪಡೆದು ಬಿಡುಗಡೆಗೊಂಡಿದ್ದರು.

       ಪೊಲೀಸರು ಈಗ ದುನಿಯಾ ವಿಜಯ್ ಮೇಲೆ 65 ಪುಟಗಳ ಚಾರ್ಜ್ ಶೀಟ್ ಸಿದ್ಧಪಡಿಸಿ ಎರಡನೇ ಎಸಿಎಂಎಂ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಈ ಸಂಬಂಧ 9 ಮಂದಿಯನ್ನ ಸಾಕ್ಷಿಯನ್ನಾಗಿ ಪರಿಗಣಿಸಿ ಹೇಳಿಕೆ ಪಡೆದಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here