ಮೋದಿ ಸಾಧನೆ ಹೇಳುವವರಿಗೆ ನಿಮ್ಮ ಗಲ್ಲಿಯ ಸಾಧನೆ ತೋರಿಸಿ ಓಡಿಸಿ : ಇಕ್ಬಾಲ್ ಅನ್ಸಾರಿ

0
11

ಕೊಪ್ಪಳ :

     ಯಾರಾರ ನಿಮ್ಮ ಓಣಿಯಲ್ಲಿ ಬಂದು ಮೋದಿ ಸಾಧನೆ ಎಂದು ಹೇಳುತ್ತಾರೋ ಅವರಿಗೆ ನಿಮ್ಮ ಗಲ್ಲಿಯ ಸಾಧನೆ ತೋರಿಸಿ ಓಡಿಸಿ ಎಂದು ಇಕ್ಬಾಲ್ ಅನ್ಸಾರಿ ಮತದಾರರಿಗೆ ಸಲಹೆ ನೀಡಿದ್ದಾರೆ.

   ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಲ್ಲಿಯ ಕೆಲವು ಬಿಜೆಪಿ ಭಕ್ತರು, ಮೋದಿ ಭಕ್ತರು ಅವರಿಗೆ ಏನೂ ಕಾಣುವುದಿಲ್ಲ. ಅವರಿಗೆ ಕಾಮಾಲೆ ಬಂದಿದೆ. ಎಲ್ಲಿ ಬೇಕು ಅಲ್ಲಿ ಸುಮ್ನೆ ಮೋದಿ, ಮೋದಿ ಎಂದು ಕೂಗುತ್ತಾರೆ. ಮೋದಿ ಏನು ಮಾಡಿದ್ದಾರೆ. ಮೋದಿ ಸಾಧನೆ ನೋಡಿ ಎಂದು ಹೇಳುತ್ತಾರೆ. ಏನಿದು ಎಂದು ಅವರು ಸ್ವಲ್ಪ ಪಟ್ಟಿ ಮಾಡಿ ತೋರಿಸಲಿ ಎಂದು  ವ್ಯಂಗ್ಯವಾಡಿದ್ದಾರೆ.

    ನಿಮ್ಮ ಹಾಗೂ ಊರಿನ ಅಭಿವೃದ್ಧಿ ಕುಂಠಿತವಾಗುತ್ತಿದೆ. ಜಾತಿ ಬೀಜ ಜಾಸ್ತಿ ಬೆಳೆಸುತ್ತಿದ್ದಾರೆ. ಇಂದು ಬಿಜೆಪಿ ಹಾಗೂ ಮೋದಿಯವರು ನಮ್ಮ ದೇಶದಲ್ಲಿ ಚುನಾವಣೆ ಬಂತು ಅಂದ್ರೆ ದೇಶದ ಜನರಿಗೆ ಪಾಕಿಸ್ತಾನ ನೋಡಿ ಎಂದು ಹೇಳುತ್ತಾರೆ. ನಾವು ಯಾಕೆ ಪಾಕಿಸ್ತಾನವನ್ನು ನೋಡಬೇಕು. ನಮಗೇನು ಗ್ರಹಚಾರ ಕಾದಿದ್ಯಾ ಎಂದು ಪ್ರಶ್ನಿಸುವುದರ ಮೂಲಕ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

 

 

LEAVE A REPLY

Please enter your comment!
Please enter your name here