ಸೌದಿ ರಾಜಕುಮಾರನಿಗೆ gun gift ಕೊಟ್ಟ ಪಾಕಿಸ್ತಾನ​

ಸೌದಿ ಅರೇಬಿಯಾ : 

  ನಮ್ಮ ದೇಶಕ್ಕೆ ಬೇರೆ ದೇಶದಿಂದ ಗಣ್ಯರು ಬಂದಾಗ ಅವರಿಗೆ ನಮ್ಮ ದೇಶದ ವಿಶೇಷವಾದ ಉಡುಗೊರೆಯನ್ನು ನೀಡಿ ಬೀಳ್ಕೊಡುವುದು ರೂಢಿ. ನೆರೆಯ ದೇಶ ಪಾಕಿಸ್ತಾನ ಕೂಡ ಈ ಪದ್ಧತಿಯನ್ನು ಅನುಸರಿಸಿಕೊಂಡು ಬಂದಿದೆ. ಆದರೆ, ಮೊನ್ನೆಯಷ್ಟೇ ಅಲ್ಲಿಗೆ ಭೇಟಿ ನೀಡಿದ್ದ ಸೌದಿ ರಾಜಕುಮಾರನಿಗೆ ನೀಡಿರುವ ಉಡುಗೊರೆ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಅಷ್ಟಕ್ಕೂ ಪಾಕ್​ ನೀಡಿದ ಉಡುಗೊರೆಯಾದರೂ ಏನು ಅಂತೀರಾ?

  ಸೌದಿ ರಾಜಕುಮಾರ ಮೊಹಮದ್ ಬಿನ್ ಸಲ್ಮಾನ್ ಪಾಕಿಸ್ತಾನ ಮತ್ತು ಭಾರತಕ್ಕೆ ಭೇಟಿ ನೀಡಿದ್ದು ಗೊತ್ತೇ ಇದೆ. ಭಾರತಕ್ಕೆ ಬರುವ ಮೊದಲು ಪಾಕಿಸ್ತಾನಕ್ಕೆ ಹೋಗಿ ಬಂದಿದ್ದ ಮೊಹಮದ್ ಬಿನ್ ಸಲ್ಮಾನ್​ ಅವರಿಗೆ ಪಾಕ್ ಉಡುಗೊರೆಯೊಂದನ್ನು ಕೊಟ್ಟು ಕಳುಹಿಸಿದೆ. ಚಿನ್ನದ ಲೇಪನವಿರುವ ಬಂದೂಕನ್ನು ಉಡುಗೊರೆಯಾಗಿ ಪಾಕ್​ ನೀಡಿದೆ.

  ಹೆಕ್ಲರ್​ ಆ್ಯಂಡ್​ ಕೋಚ್​ ಎಂಪಿ5 ಎಂಬ ಸಬ್​ಮಷಿನ್ ಬಂದೂಕನ್ನು ಜರ್ಮನ್​ ಇಂಜಿನಿಯರ್​ಗಳು ತಯಾರಿಸಿದ್ದಾರೆ. ಈ ಬಂದೂಕನ್ನು ಚಿನ್ನದ ಲೇಪನದ ವಸ್ತುಗಳಿಂದ ತಯಾರಿಸಲಾಗಿದೆ. ಈ ನಡುವೆ ಪಾಕಿಸ್ತಾನದ ಶಾಸಕರು ಮತ್ತು ಸಂಸದರು ಕೂಡ ಸೌದಿ ರಾಜಕುಮಾರನ ಚಿತ್ರವಿರುವ ಪುತ್ಥಳಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap