40 ಕೋಟಿ ಸಾಲ ಮಾಡಿದ್ದಾರಂತೆ ರಾಕಿಂಗ್ ಸ್ಟಾರ್ ….!!

0
103

ಬೆಂಗಳೂರು:

   ಯಶ್ ಮನೆಯಲ್ಲಿ ಐಟಿ ಅಧಿಕಾರಿಗಳಿಂದ ಶೋಧಕಾರ್ಯ ಮುಂದುವರಿದಿದೆ. ಹೊಸಕೆರೆಹಳ್ಳಿಯಲ್ಲಿರುವ ಯಶ್ ಮನೆಯಲ್ಲಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.  ಯಶ್ ಮನೆಯಲ್ಲಿ ಸಿಕ್ಕಿರುವ ದಾಖಲೆಗಳನ್ನಿಟ್ಟುಕೊಂಡು ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

  ಯಶ್ ಅವರ ತಾಯಿ ಮನೆಯಲ್ಲಿರುವ ಚಿನ್ನ, ಆಸ್ತಿ ಪತ್ರ, ಬ್ಯಾಂಕ್‍ನ ಡಿಟೈಲ್ ನೀಡುತ್ತಿದ್ದಾರೆ. ಐಟಿ ಅಧಿಕಾರಿಗಳು ಯಶ್ ಮನೆಯಲ್ಲಿರುವ ಚಿನ್ನ ನಗನಾಣ್ಯ ಯಶ್ ಅವರ ತಾಯಿ ಮುಂದೆ ಲೆಕ್ಕ ಮಾಡಿದ್ದಾರೆ. 20 ಕೆಜಿಗೂ ಅಧಿಕ ಬೆಳ್ಳಿ, ಸುಮಾರು 450ಗ್ರಾಂ ಚಿನ್ನ, ಒಂದು ವಜ್ರದ ಸರ ಹಾಗೂ ಎರಡು ಪ್ಲಾಟಿನಮ್ ಸರ ಇರುವುದು ಹಾಗೂ ಯಶ್ 8 ಬ್ಯಾಂಕ್ ಖಾತೆ ಹೊಂದಿದ್ದು, ನಾಲ್ಕು ಖಾತೆ ತಾಯಿಯೊಂದಿಗೆ ಜಂಟಿ ಖಾತೆ ಹೊಂದಿದ್ದಾರೆ.

   ಎರಡು ಬ್ಯಾಂಕ್ ನಲ್ಲಿ ಯಶ್ ಅವರಿಗೆ 40 ಕೋಟಿ ಸಾಲ ಇದೆ.  ಒಂದು ಬ್ಯಾಂಕ್ ನಲ್ಲಿ 13 ಕೋಟಿ, ಮತ್ತೊಂದರಲ್ಲಿ 17 ಕೋಟಿ ಸಾಲ ಇದೆ ಎಂದು ಹೇಳಲಾಗುತ್ತಿದೆ. ಮಂಡ್ಯದ ಬಳಿ ಜಮೀನೂ ಖರೀದಿ ಮಾಡಿರುವುದಾಗಿ ಯಶ್ ತಾಯಿ ಹೇಳಿದ್ದಾರೆ. ಅಲ್ಲದೇ 8 ಎಕರೆ ಯಶ್ ಮನೆ ಅವರ ಹೆಸರಲ್ಲಿ ರಿಜಿಸ್ಟರ್ ಆಗಿದೆ ಎಂದು ತಿಳಿಸಿದ್ದಾರೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

LEAVE A REPLY

Please enter your comment!
Please enter your name here