ಶಬರಿಮಲೆಯಲ್ಲಿ ನಾಳೆ ಲಕ್ಷಾಂತರ ಅಯ್ಯಪ್ಪ ಭಕ್ತರು ‘ಮಕರ ಜ್ಯೋತಿ’ ದರ್ಶನ

0
25

ಶಬರಿಮಲೆ, : 

ಶಬರಿಮಲೆಯಲ್ಲಿ ನಾಳೆ ಲಕ್ಷಾಂತರ ಅಯ್ಯಪ್ಪ ಭಕ್ತರು ‘ಮಕರ ಜ್ಯೋತಿ’ ದರ್ಶನ ಮಾಡುವುದರೊಂದಿಗೆ ಪ್ರಸಕ್ತ ಹಂಗಾಮಿನ ಎರಡು ತಿಂಗಳ ಶಬರಿಮಲೆ ಯಾತ್ರೆ ಕೊನೆಗೊಳ್ಳಲಿದೆ.
ಇದಕ್ಕೆ ಮುಂಚಿತವಾಗಿ, ಅಯ್ಯಪ್ಪನ ವಿಗ್ರಹವನ್ನು ‘ತಿರುವಾಭರಣಂ’ ನೊಂದಿಗೆ ಅಲಂಕರಿಸಿ ಪಾಂಡುಲಂ ವಲಿಯೊಯಿಕ್ಕಲ್ ದೇವಸ್ಥಾನದಿಂದ ತರಲಾಗುವುದು.
ಮಕರ ಸಂಕ್ರಮಣ ಪೂಜೆಯ ಭಾಗವಾಗಿ, ಹಿಂದಿನ ತಿರುವಂಕೂರು ಅರಸರ ಅರಮನೆಯಿಂದ ತಂದ ತುಪ್ಪವನ್ನು ಬಳಸಿ’ ನಯ್ಯಭಿಷೇಕಂ ‘ ನಡೆಸಲಾಗುವುದು.

ಸೂರ್ಯ, ಧನು ರಾಶಿಯಿಂದ ಮಕರ ರಾಶಿಗೆ ಪಥ ಬದಲಿಸುವ ವೇಳೆ ಸಂಕ್ರಮಣ ಪೂಜೆ ನಡೆಯುತ್ತದೆ. ಪವಿತ್ರ ಆಭರಣದೊಂದಿಗೆ ‘ತಿರುವಾಭರಣಂ’ ಮೆರವಣಿಗೆ ಇಂದು ಪಂಡಲಂ ನಿಂದ ಹೊರಟು, ನಾಳೆ ಸಂಜೆ 4 ಗಂಟೆಗೆ ಸರಂಕುತಿಗೆ ತಲುಪಲಿದೆ. ಆ ನಂತರ ತಿರುವಾಭರಣಂ,ಸನ್ನಿಧಾನಕ್ಕೆ ಬೆಂಗಾವಲಿನೊಂದಿಗೆ ಕೊಂಡೊಯ್ಯಲಾಗುವುದು.

ಉನ್ನತ ಪೊಲೀಸ್ ಅಧಿಕಾರಿಗಳು ಹಾಗೂ ತಿರುವಂಕೂರು ದೇವಸ್ಥಾನ ಮಂಡಳಿ ತಿರುವಾಭರಣಂ ಅನ್ನು ಸ್ವೀಕರಿಸಲಿದ್ದಾರೆ.
ಸೋಪಾನಂನಲ್ಲಿ ‘ತಿರುವಭಾರಣಂ’ ಪೆಟ್ಟಿಗೆಯನ್ನು ಪ್ರಧಾನ ಅರ್ಚಕ ವಿ.ಎನ್. ವಾಸುದೇವನ್ ನಂಬೂದರಿ ಸ್ವೀಕರಿಸುತ್ತಾರೆ.

ನಂತರ, ಅಯ್ಯಪ್ಪ ದೇವರನ್ನು ಪವಿತ್ರ ಆಭರಣದೊಂದಿಗೆ ಅಲಂಕರಿಸಿ ನಂತರ ದೀಪರಾದನೆ ಮಾಡಲಾಗುವುದು. ದೀಪಾರಾದನೆ ವೇಳೆ ಪೊನ್ನಂಬಲಮೆಡುನಲ್ಲಿ `ಮಕರ ಜ್ಯೋತಿ? ಕಾಣಬಹುದಾಗಿದೆ.

ದೀಪರಾಧನೆಯ ವೇಳೆ, ಸನ್ನಿಧಾನದ ಪೂರ್ವ ದಿಗಂತದಲ್ಲಿ ಖಗೋಳ ನಕ್ಷತ್ರದ (ಮಕರ ಜ್ಯೋತಿ) ದೃಶ್ಯವು  ಪೊನ್ನಂಬಲಮೆಡು ಮೇಲೆ ನಡೆಯುತ್ತದೆ, ಪೊನ್ನಂಬಲಮೆಡು, ಶಬರಿಮಲೆ ದೇವಸ್ಥಾನ ಎದುರು ಇರುವ ಕಾಡುಗಳ ಒಳಗಿನ ದೂರದ ಬೆಟ್ಟವಾಗಿದೆ.
ಮಕರವಿಳಕು ಉತ್ಸವಕ್ಕೆ ಆಗಮಿಸುವ ಯಾತ್ರಿಗಳಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗಿದೆ.

ಮಕರ ಜ್ಯೋತಿಗೆ ಸಾಕ್ಷಿಯಾಗಲು ಅಪಾರ ಸಂಖ್ಯೆಯ ಯಾತ್ರಾರ್ಥಿಗಳನ್ನು ಒಂದೆಡೆ ಸೇರಿಸಲು ಪೊಲಿಸ್ ಮತ್ತು ಅರಣ್ಯ ಇಲಾಖೆಗಳು ಕೆಲ ಜಾಗಗಳನ್ನು ಗುರುತಿಸಿವೆ.

ಪೊಲೀಸ್, ಅಗ್ನಿಶಾಮಕ ಮತ್ತು ಅಬಕಾರಿ ಇಲಾಖೆಗಳು ಯಾತ್ರಿಕರ `ಮಕರ ಜ್ಯೋತಿ? ವೀಕ್ಷಣೆಯ ಪ್ರದೇಶಗಳನ್ನು ಪರಿಶೀಲಿಸಿದ್ದಾರೆ.
ಪಂಡಿತವಲಂನಿಂದ ಪಂಬಾಗೆ ಯಾತ್ರಾರ್ಥಿಗಳು ಸುಗಮವಾಗಿ ಹಾಗೂ ಸುರಕ್ಷಿತವಾಗಿ ಸಾಗಲು ಎನ್.ಡಿ.ಆರ್.ಎಫ್, ಆರ್ಪಿಎಫ್ ಮತ್ತು ಪೊಲೀಸ್ ಇಲಾಖೆಗಳು ಅಗತ್ಯ ವ್ಯವಸ್ಥೆಗಳನ್ನು ಕೈಗೊಂಡಿವೆ.
ಜನವರಿ 20 ರಂದು ಪಾಂಡುಲಂ ಅರಮನೆಯ ರಾಜರ ಪ್ರತಿನಿಧಿಗಳಿಗೆ ಪ್ರತ್ಯೇಕವಾಗಿ ಪವಿತ್ರ ದರ್ಶನಕ್ಕೆ ಅವಕಾಶ ಮಾಡಿಕೊಡುವುದರೊಂದಿಗೆ ವಾರ್ಷಿಕ ಮಕರವಿಳಕ್ಕು ಉತ್ಸವ ಅಂತ್ಯಗೊಂಡು ಅದೇ ದಿನ ದೇವಾಲಯವು ಮುಚ್ಚಲ್ಪಡುತ್ತದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

LEAVE A REPLY

Please enter your comment!
Please enter your name here