ಶಂಕರ್ ನಾಗ್ ಇದ್ದಿದ್ದರೆ, 64 ರ ಸಂಭ್ರಮ..!

0
49

Related image      ನವೆಂಬರ್ 9 ಶಂಕರ್ ನಾಗ್ ಹುಟ್ಟು ಹಬ್ಬ.  ಕರಾಟೆ ಕಿಂಗ್ ಎಂದು ಹೆಸರಾಗಿದ್ದ  ಕನ್ನಡ ಚಿತ್ರರಂಗ ಕಂಡ ಅದ್ಭುತ ಪ್ರತಿಭಾವಂತ ನಟ, ನಿರ್ದೇಶಕ, ರಂಗಭೂಮಿ ಕಲಾವಿದ ಶಂಕರ್ ನಾಗರ್ ಕಟ್ಟೆ ಬದುಕಿದ್ದರೆ ಇಂದು ಅವರಿಗೆ 64ನೇ ಹುಟ್ಟುಹಬ್ಬದ ಸಂಭ್ರಮವಾಗಿರುತ್ತಿತ್ತು.

      ಉತ್ತರಕನ್ನಡದ ಹೊನ್ನಾವರ ತಾಲೂಕಿನ ಮಲ್ಲಾಪುರದಲ್ಲಿ ಜನಿಸಿದ್ದ ಶಂಕರ್ ನಾಗ್ ನಟನೆ ಮತ್ತು ನಿರ್ದೇಶನದ ಉತ್ತುಂಗದ ಶಿಖರದಲ್ಲಿದ್ದಾಗಲೇ ಅಪಘಾತದಲ್ಲಿ ತೀರಿಕೊಂಡಿದ್ದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿತ್ತು.

      ಸೆಪ್ಟೆಂಬರ್ 30, 1990  ರಂದು ದಾವಣಗೆರೆಯ ಹಳ್ಳಿಯೊಂದಾದ ಅನಗೋಡು ಹಳ್ಳಿಯಲ್ಲಿ ಜೋಕುರಸ್ವಾಮಿ ಚಿತ್ರದ ಚಿತ್ರೀಕರಣ ನಡೆಯುತ್ತಿರುವ ಸಂದರ್ಭವದು. ಧಾರವಾಡದಿಂದ ತೆರಳುತ್ತಿದ್ದ ಶಂಕರ್ ನಾಗ್ ಅವರು ಕಾರು ಅಪಘಾತದಿಂದ ತಮ್ಮ ಕೊನೆಯುಸಿರೆಳೆದರು.

      ಶಂಕರ್ ನಾಗ್ ಪತ್ನಿ ಹಾಗೂ ಓರ್ವ ಮಗಳಾದ ಕಾವ್ಯ ಅವರನ್ನು ಅಗಲಿದರು ಶಂಕರ್ ನಾಗ್, ತಮ್ಮ ಪರಿವಾರವನ್ನಷ್ಟೇ ಅಲ್ಲ ಇಡೀ ಚಿತ್ರೋಧ್ಯಮವನ್ನು ಅತೀ ಕಡಿಮೆ ಸಮಯದಲ್ಲಿ ತನ್ನತ್ತಾ ವಾಲುವಂತೆ ಮಾಡಿದ್ದ ಏಕೈಕ ವ್ಯಕ್ತಿಯನ್ನು ಕಳೆದುಕೊಂಡ ಕನ್ನಡ ಚಿತ್ರೋಧ್ಯಮ ಅನಾಥ ವಾಯಿತೆಂದರೆ ತಪ್ಪಾಗಲಾರದು.

Related image

ದೂರದೃಷ್ಟಿಯುಳ್ಳ ನಟ:

      ನಟ ಶಂಕರ್ ನಾಗ್ ಕೇವಲ ರಂಗಭೂಮಿ ನಟ, ನಿರ್ದೇಶಕ, ಟಿವಿ ಸೀರಿಯಲ್ ನಿರ್ದೇಶಕ ಮಾತ್ರ ಆಗಿರಲಿಲ್ಲ. ಬೆಂಗಳೂರಿನ ಪ್ರಸಿದ್ಧ ನಂದಿಬೆಟ್ಟಕ್ಕೆ ರೋಪ್ ವೇ ಆಗಬೇಕು, ಜನ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಮತ್ತು ಟ್ರಾಫಿಕ್ ಜಾಮ್ ಗೆ ಕಡಿವಾಣ ಹಾಕಲು ಮೆಟ್ರೋ ಬೇಕು ಎಂದು ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರಿಗೆ ಮನವರಿಕೆ ಮಾಡಿದ್ದರಂತೆ. ಐಟಿ ನಗರವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ಲಂಡನ್ ರೀತಿ ಅಂಡರ್ ಗ್ರೌಂಡ್ ರೈಲ್ವೆ ವ್ಯವಸ್ಥೆಯ ಅಗತ್ಯತೆ ಇದೆ ಎಂದಿದ್ದರು.

      ಶಂಕರ್ ಅವರ ಸರಳ, ಪ್ರಾಮಾಣಿಕ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ. ಇಂದಿಗೂ ಆಟೋಗಳ ಹಿಂದೆ ಶಂಕರ್ ನಾಗ್ ಅವರ ಫೋಟೋ ರಾರಾಜಿಸುತ್ತೆ.

 

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 


LEAVE A REPLY

Please enter your comment!
Please enter your name here