ಸಿದ್ಧರಾಮಯ್ಯ ಹ್ಯೂಬ್ಲೋಟ್‌ ವಾಚ್‌ ಪ್ರಕರಣಕ್ಕೆ ಹೊಸ ಟ್ವಿಸ್ಟ್ !!!

0
454

ಬೆಂಗಳೂರು: 

          ನಮ್ಮ ರಾಜ್ಯದ ಈಗಿನ ಶಕ್ತಿ ಕೇಂದ್ರ ಎಂದೇ ಬಿಂಬಿತವಾಗಿರುವ ಸನ್ಮಾನ್ಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆ ಧರಿಸಿದ್ದ  ಹ್ಯೂಬ್ಲೋಟ್‌ ವಾಚ್‌ ಪ್ರಕರಣಕ್ಕೆ ಹೊಸ ತಿರುವು ಪಡೆದುಕೊಂಡಿದೆ, ಭ್ರಷ್ಟಾಚಾರ ನಿಗ್ರಹ ದಳಕ್ಕೆ ನೀಡಿರುವ ವಾಚ್‌ ಖರೀದಿ ಬಿಲ್‌ ನಕಲಿ ಎಂದು ಆರೋಪಿಸಿರುವ ದೂರುದಾರ ಮರು ತನಿಖೆ ಕೋರಿ ಎಸಿಬಿಗೆ ದೂರು ನೀಡಲು ಮುಂದಾಗಿದ್ದಾರೆ. 

      ಸನ್ಮಾನ್ಯ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ  ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ತನಿಖೆಯಲ್ಲಿ ಲೋಪ ಆಗುವಂತೆ ಮಾಡಿ ತನಿಖೆಯನ್ನು ತಪ್ಪು ಹಾದಿ ಹಿಡಿಸಿ ಕ್ಲೀನ್‌ ಚಿಟ್‌ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ ಮತ್ತು ಈಗ ವಾಚ್‌ ಖರೀದಿಯ ಬಿಲ್‌ ನ ಅಸಲಿಯತ್ತಿನ ಬಗ್ಗೆಯೇ ಅನುಮಾನ ಮೂಡಿದೆ.

      ವಿದೇಶಿ ವಾಚ್‌ ಖರೀದಿ ಮಾಡಿದ ಒಂದು ವರ್ಷದ ಬಳಿಕ ಕಸ್ಟಮ್ಸ್‌ ಡ್ಯೂಟಿ ಫೀ ಕಟ್ಟಲಾಗಿದೆ. ಅಷ್ಟೇ ಅಲ್ಲದೇ ವಾಚ್‌ ಉಡುಗೊರೆ ನೀಡಿದ್ದಾಗಿ ಬಿಲ್‌ ಇನ್‌ವಾಯ್ಸ್‌ ನೀಡಿದ್ದ ಸಿದ್ದರಾಮಯ್ಯ ಅವರ ಸ್ನೇಹಿತ ಡಾ.ಗಿರೀಶ್‌ ಚಂದ್ರ ವರ್ಮಾ ಅವರ ವಿಚಾರಣೆ ನಡೆಸಿದ ಐದು ದಿನಗಳ ಬಳಿಕ ಕಸ್ಟಮ್ಸ್‌ ಡ್ಯೂಟಿ ಫೀ ಕಟ್ಟಲಾಗಿದೆ. ಈ ಅಂಶವೂ ಇತ್ತೀಚೆಗೆ ಹೈಕೋರ್ಟ್‌ ನಿರ್ದೇಶನದ ಬಳಿಕ ಎಸಿಬಿ ಒದಗಿಸಿರುವ ವಿಚಾರಣಾ ವರದಿಯಿಂದ ಗೊತ್ತಾಗಿದೆ” ಎಂದು ದೂರುದಾರ ನಟರಾಜ್‌ ಶರ್ಮಾ ತಿಳಿಸಿದರು. 

ವಿಚಾರಣೆಯಲ್ಲಿ ಲೋಪ 

          ಹ್ಯೂಬ್ಲೋಟ್‌ ವಾಚ್‌ ಹಿಂದೆ ಅಕ್ರಮ ಅಡಗಿದೆ ಎಂದು ಆರೋಪಿಸಿ ವಕೀಲ ನಟರಾಜ ಶರ್ಮಾ ಎಸಿಬಿಗೆ 2016ರಲ್ಲಿ ದೂರು ನೀಡಿದ್ದರು. ಈ ಕುರಿತು ವಿಚಾರಣೆ ನಡೆಸಿದ ಎಸಿಬಿ ಅಧಿಕಾರಿಗಳು, ವಾಚ್‌ ಉಡುಗೊರೆ ನೀಡಿದ್ದಾಗಿ ತಿಳಿಸಿದ್ದ ಡಾ.ಗಿರೀಶ್‌ ಚಂದ್ರ ವರ್ಮಾ ಅವರಿಗೆ ನೋಟಿಸ್‌ ನೀಡಿದ್ದರು. ವಿಚಾರಣೆಗೆ ಹಾಜರಾದ ಅವರು ದುಬೈನಲ್ಲಿ ಖರೀದಿಸಿದ್ದಾಗಿ ಹೇಳಿದ ಬಿಲ್‌ ಅನ್ನು ಎಸಿಬಿಗೆ ನೀಡಿದ್ದರು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here