ಗಂಗನಘಟ್ಟದ ಹೀರೆಕೆರೆಗೆ ಬೇಕಿದೆ ಕಾಯಕಲ್ಪ

ರಂಗನಾಥ್ ತಿಪಟೂರು :
  ತಾಲ್ಲೂಕಿನ ನೊಣವಿನಕೆರೆ ಹೋಬಳಿಯ ಗಡಿಭಾಗದಲ್ಲಿರುವ ಹೀರೆಕೆರೆಗೆ ಪ್ರವಾಸೋದ್ಯಮ ಇಲಾಖೆಯಿಂದ ಅಭಿವೃದ್ಧಿಪಡಿಸಿದರೆ ಉತ್ತಮವಾದ ಪ್ರವಾಸಿ ತಾಣವಾಗುತ್ತ ದಾಪುಗಾಲಿಡುತ್ತಿದ್ದು ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ.

  ಗಂಗನಘಟ್ಟದ ಹೀರೆಕೆರೆಯು ತಾಲ್ಲೂಕು ಕೇಂದ್ರವಾದ ತಿಪಟೂರಿನಿಂದ ಕೇವಲ 13 ಕಿ.ಮೀ ದೂರದಲ್ಲಿದ್ದು ತಾಲ್ಲೂಕಿನ ಜನತೆಗೆ ಒಂದು ಅದ್ಬುತವಾದ ಪ್ರವಾಸಿತಾಣವಾಗಿದೆ. ಹೀರೆಕೆರೆಯು ಹೇಮಾವತಿ ನಾಲಾ ನೀರಿನಿಂದ ತುಂಬಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದು ದಿನಾಲು ಸಾವಿರಾರು ಜನರು ಬಂದು ಕೆರೆ ನೀರಿನಲ್ಲಿ ಸಮಯಕಳೆದು ಹೋಗುತ್ತಿದ್ದು ಉತ್ತಮ ಪ್ರವಾಸಿ ತಾಣವಾಗುವತ್ತ ಹೊರಟಿದೆ.

   ಈ ಕೆರೆಯ ವಿಶೇಷವೆಂದರೆ ಕೆರೆಯ ಕೋಡಿಯ ಮುಂದೆ ವಿಶಾಲವಾದ ಬಂಡೆಗಳಿದ್ದು ಅಲ್ಲಿ ಪ್ರವಾಸಿಗರು ಕುಳಿತು ಸಂತೋಷವಾಗಿ ನೀರಿನಲ್ಲಿ ಆಟವಾಡಬಹುದು. ಸ್ಥಳೀಯರು ಹೇಳುವ ಪ್ರಕಾರ ಈ ಕೆರೆಯು ತಾಲ್ಲೂಕಿನಲ್ಲಿ ಮೊದಲು ತುಂಬುತ್ತದೆ. ನಂತರ ಈ ಕೆರೆಯ ಕೋಡಿಯ ಮುಖಾಂತರ ಹೋಗುವ ನೀರಿನಿಂದಲೇ ನೊಣವಿನಕೆರೆ, ತುರುವೇಕೆರೆ ತಾಲ್ಲೂಕಿನ ಮಲ್ಲಾಘಟ್ಟ ಕೆರೆಯಿಂದ ಕುಣಿಗಲ್‍ನ ಮಾರ್ಕೋನಹಳ್ಳಿ ಜಲಾಶಯಕ್ಕೆ ನೀರು ಹರಿದು ಹೋಗುವುದರಿಂದ ಮೊದಲೇ ತುಂಬಿ ತುಳುಕುತ್ತದೆ. ಇಲ್ಲಿಗೆ ಹತ್ತಿರವಿರುವ ಸುಕ್ಷೇತ್ರಗಳಾದ ರಂಗಾಪುರ, ದಸರೀಘಟ್ಟ, ಗಂಗನಘಟ್ಟಕ್ಕೆ ಬರುವ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಿರುವುದರಿಂದ ಪ್ರವಾಸೋದ್ಯಮ ಇಲಾಖೆಯವರು ಇತ್ತಗಮನಹರಿಸಿದರೆ ಉತ್ತಮವಾದ ಪ್ರವಾಸಿತಾಣವಾಗುತ್ತದೆ ಎಂದರು.

   ಪ್ರವಾಸಿ ಹೊಳೆನರಸೀಪುರದ ರಾಜು ಹೇಳುವಂತೆ ಇಂತಹ ಸ್ಥಳವು ತಿಪಟೂರು ತಾಲ್ಲೂಕಿನಲ್ಲಿ ಧಾರ್ಮಿಕ ಕ್ಷೇತ್ರಗಳ ಜೊತೆಗೆ ಇಂತಹ ಕೆರೆ ಇರುವುದು ಇತ್ತೀಚೆಗೆ ಸ್ನೇಹಿತರಿಂದ ತಿಳಿದು ಇಲ್ಲಿಗೆ ಭೇಟಿ ನೀಡಿದಾಗ ಮತ್ತೊಮ್ಮೆ ಬರಬೇಕೆಂಬ ಆಸೆಯಾಗುತ್ತದೆ ಎಂದರು.
ಸ್ಥಳೀಯ ವ್ಯಾಪಾರಿಗಳು ಹೇಳುವಂತೆ ಇಲ್ಲಿಗೆ ದಿನಾಲು ಸಾಕಷ್ಟು ಜನರು ಬರುತ್ತಿದ್ದು ಕೆರೆಯು ತಂಬಾ ಆಳವಾಗಿದೆ. ಆದರೆ ಕೋಡಿಯಲ್ಲಿ ಹೋಗುವ ನೀರಿನಲ್ಲಿ ಆಟವಾಡುವುದು ಸೂಕ್ತ ಮತ್ತೆ ಇಲ್ಲಿಗೆ ಬರುವ ಪ್ರವಾಸಿಗರಿಂದ ನಮಗೆ ಉತ್ತಮವಾದ ವ್ಯಾಪಾರವಾಗಿ ನಮ್ಮ ಜೀವನಕ್ಕೂ ಒಂದು ದಾರಿಯಾಗಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap