ಫ್ರೇಂಡ್ಸ್ ವೆಲ್ ಫೇರ್ ಆರ್ಗನೈಸೇಶನ್ ವತಿಯಿಂದ 25 ನೇ ಉಚಿತ ಪ್ಲಾಸ್ಟಿಕ್ ಸರ್ಜರಿ ಶಿಬಿರ

0
29

ತುಮಕೂರು:

  ಸೀಳು ತುಟಿ, ಸೀಳು ಮೇಲು ದವಡೆ, ಸುಟ್ಟ ಗಾಯಗಳು ಇರುವವರಿಗೆ ಉಚಿತವಾಗಿ ಚಿಕಿತ್ಸೆ ಪಡೆಯಲು ಮತ್ತೊಂದು ಅವಕಾಶ ಒದಗಿ ಬಂದಿದೆ. ಫ್ರೆಂಡ್ಸ್ ವೆಲ್‍ಫೇರ್ ಆರ್ಗನೈಸೇಷನ್ 25 ನೇ ಉಚಿತ ಪ್ಲಾಸ್ಟಿಕ್ ಸರ್ಜರಿ ಶಿಬಿರವನ್ನು ಬೆಂಗಳೂರಿನಲ್ಲಿ ಆಯೋಜಿಸುತ್ತಿದೆ.

  ಪ್ರತಿ ವರ್ಷದಂತೆ ಫ್ರೆಂಡ್ಸ್ ವೆಲ್‍ಫೇರ್ ಆರ್ಗನೈಸೇಷನ್ ಈ ವರ್ಷವೂ ಆಯೋಜಿಸುತ್ತಿದೆ. ಇದು ಸಂಸ್ಥೆ ನಡೆಸುತ್ತಿರುವ 25 ನೇ ಉಚಿತ ಪ್ಲಾಸ್ಟಿಕ್ ಸರ್ಜರಿ ಶಿಬಿರವಾಗಿದೆ. ಈ ವರ್ಷದ ಶಿಬಿರದ ವಿಶೇಷವೆಂದರೆ ಜರ್ಮನಿಯ ನುರಿತ ಪ್ಲಾಸ್ಟಿಕ್ ತಜ್ಞರ ತಂಡ ಆಗಮಿಸಿ ಸೂಕ್ತ ಚಿಕಿತ್ಸೆ ಮತ್ತು ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಲಿದೆ. ಸೀಳು ತುಟಿ, ಸೀಳು ಮೇಲ್ದವಡೆ, ಸುಟ್ಟ ಗಾಯಗಳಿಂದ ಚರ್ಮಕ್ಕೆ ಆಗಿರುವ ಹಾನಿಯನ್ನು ಈ ಪ್ಲಾಸ್ಟಿಕ್ ಸರ್ಜರಿ ಶಿಬಿರದಲ್ಲಿ ಸರಿಪಡಿಸಲಾಗುವುದು.

  2019 ರ ಫೆಬ್ರವರಿ 3 ರಂದು ಭಾನುವಾರ ಸೀಳು ತುಟಿ ಸೇರಿದಂತೆ ಮತ್ತಿತರೆ ಸಮಸ್ಯೆಗಳಿಂದ ಬಳಲುತ್ತಿರುವವರನ್ನು ತಪಾಸಣೆ ನಡೆಸಲಾಗುತ್ತದೆ. ಮರುದಿನ ಅಂದರೆ 2019 ರ ಫೆಬ್ರವರಿ 4 ರಿಂದ 13 ರವರೆಗೆ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುತ್ತದೆ.

  ಮಲ್ಲೇಶ್ವರಂ 18 ನೇ ಕ್ರಾಸ್‍ನಲ್ಲಿರುವ (ಬಸ್‍ಸ್ಟಾಪ್ ಎದುರು) ವೇಗಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆಯಲಿರುವ ಈ ಶಿಬಿರಕ್ಕೆ  ಬಂದು ಸಾರ್ವಜನಿಕರು ತಮ್ಮ ಸೀಳು ತುಟಿಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

  ಈ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ರೋಗಿಗಳು ತಮ್ಮ ಜತೆ ಕಡ್ಡಾಯವಾಗಿ ಕುಟುಂಬ ಸದಸ್ಯರು ಅಥವಾ ಸಂಬಂಧಿಕರನ್ನು ಕರೆದುಕೊಂಡು ಬರಬೇಕು.

  ಈ ಶಿಬಿರದ ವಿವರಗಳು ಇಂತಿವೆ:-
ಪರೀಕ್ಷಾ/ತಪಾಸಣೆ ದಿನ: 3 ನೇ ಫೆಬ್ರವರಿ 2019 ರಂದು ಬೆಳಗ್ಗೆ 8.30 ರಿಂದ.
ಶಸ್ತ್ರ ಚಿಕಿತ್ಸೆ ದಿನಾಂಕ: 4 ನೇ ಫೆಬ್ರವರಿ 2019 ರಿಂದ 13 ನೇ ಫೆಬ್ರವರಿ ಜನವರಿ 2019 ರವರೆಗೆ.
ಸ್ಥಳ: ವೇಗಸ್ ಸೂಪರ್ ವಿಶೇಷ ಆಸ್ಪತ್ರೆ
18 ನೇ ಕ್ರಾಸ್, ಬಸ್ ನಿಲ್ದಾಣದ ಹತ್ತಿರ ಮಲ್ಲೇಶ್ವರಂ ಬೆಂಗಳೂರು- 560003.

 ಈ ಶಿಬಿರದಲ್ಲಿ ಪಾಲ್ಗೊಳ್ಳುವ ರೋಗಿಗಳು 3ನೇ ಫೆಬ್ರವರಿ 2019 ರಂದು ಬೆಳಗ್ಗೆ 8 ಗಂಟೆಗೆ ಈ ಮೇಲಿನ ವಿಳಾಸದಲ್ಲಿ ಹಾಜರಿರಬೇಕು. ಹೆಚ್ಚಿನ ಮಾಹಿತಿಗಾಗಿ 9880307780 / 9148741707 ಇವರನ್ನು ಸಂಪರ್ಕಿಸಬಹುದು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page

LEAVE A REPLY

Please enter your comment!
Please enter your name here