ಪಾಕ್ ಗೆ ನೀಡುತ್ತಿದ್ದ ಆರ್ಥಿಕ ನೆರವು ನಿಲ್ಲಿಸಿ ಭಾರತದ ಪರ ನಿಂತ ಅಮೆರಿಕಾ!

ವಾಷಿಂಗ್ಟನ್:

     ಪಾಕಿಸ್ತಾನಕ್ಕೆ ಅಮೆರಿಕಾ ನೀಡುತ್ತಿರುವ 9 ಸಾವಿರ ಕೋಟಿ ರೂ. ಆರ್ಥಿಕ ನೆರವನ್ನು ನಿಲ್ಲಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್ ತಿಳಿಸಿದ್ದಾರೆ.

     “ನಾವು ಪ್ರತಿ ವರ್ಷ ಪಾಕಿಸ್ತಾನಕ್ಕೆ 9 ಸಾವಿರ ಕೋಟಿ ರೂ. ಆರ್ಥಿಕ ನೆರವು ನೀಡುತ್ತಿದ್ದೆವು. ಆದರೆ, ಅವರು ನಮಗೆ ಯಾವ ರೀತಿ ಸಹಾಯ ಮಾಡಬೇಕಿತ್ತೋ ಆ ರೀತಿಯಲ್ಲಿ ಸಹಕಾರ ನೀಡುತ್ತಿಲ್ಲ. ಹಾಗಾಗಿ, ಅವರಿಗೆ ಪ್ರತಿ ವರ್ಷ ನೀಡುತ್ತಿರುವ ಈ ಆರ್ಥಿಕ ನೆರವನ್ನು ನಾವು ನಿಲ್ಲಿಸುತ್ತಿದ್ದೇವೆ,” ಈ ಮೂಲಕ ಉಗ್ರರ ವಿರುದ್ಧ ಕ್ರಮ ಕೈಗೊಂಡರಷ್ಟೇ ನೆರವು ಎನ್ನುವ ಕಠಿಣ ಸಂದೇಶ ರವಾನಿಸಿದ್ದಾರೆ.

    ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿ ನಂತರದಲ್ಲಿ ಭಾರತ-ಪಾಕಿಸ್ತಾನದ ನಡುವಣ ಸಂಬಂಧ ತೀವ್ರವಾಗಿ ಹದಗೆಟ್ಟಿದ್ದು, ಇದು ಅತ್ಯಂತ ಅಪಾಯಕಾರಿ ಪರಿಸ್ಥಿತಿ. ಈ ಹಗೆತನವನ್ನು ನಾವು ಪೂರ್ಣಗೊಳಿಸಲು ಬಯಸುತ್ತೇವೆ. ಆ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಿದ್ದೇವೆ” ಎಂದು ಟ್ರಂಫ್ ತಿಳಿಸಿದ್ದಾರೆ.

    ಎರಡು ರಾಷ್ಟ್ರಗಳ ಜೊತೆ ಅಮೆರಿಕ ಸಂಪರ್ಕದಲ್ಲಿದೆ ಎಂದಿರುವ ಟ್ರಂಪ್​, “ನಾವು ಭಾರತ ಹಾಗೂ ಪಾಕ್​ ನಾಯಕರ ಜೊತೆ ಮಾತುಕತೆ ನಡೆಸುತ್ತಿದ್ದೇವೆ. ಕಾಶ್ಮೀರ ಮೊದಲಿನ ಸ್ಥಿತಿಗೆ ಮರಳುವ ನಿರೀಕ್ಷೆ ಇದೆ ಎಂದಿದ್ದಾರೆ​.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap