ಕೊಹ್ಲಿ ವಿರುದ್ಧ ಗವಾಸ್ಕರ್ ಗರಂ…!?

0
53

 ಪರ್ತ್:

     ‘ನಾಯಕ ಕೊಹ್ಲಿಯ ತಪ್ಪು ಆಯ್ಕೆಗಳೇ, ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಭಾರತ ತಂಡದ ಸೋಲಿಗೆ ಕಾರಣ’ ಎಂದು ಭಾರತದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಕಿಡಿಕಾರಿದ್ದಾರೆ.

Image result for virat kohli sunil gavaskar

      2ನೇ ಟೆಸ್ಟ್‌ನಲ್ಲಿ ಭಾರತ ತಂಡ ಸ್ಪಿನ್ನರ್‌ಗಳನ್ನು ಬದಿಗಿಟ್ಟು 4 ವೇಗಿಗಳೊಂದಿಗೆ ಕಣಕ್ಕಿಳಿದಿತ್ತು. ಆದರೆ ಪಂದ್ಯದಲ್ಲಿ ಆಸೀಸ್ ಸ್ಪಿನ್ನರ್ ನೇಥನ್ ಲಯನ್ ನಿರ್ಣಾಯಕ ಪಾತ್ರ ವಹಿಸಿದ್ದರು. ‘ಮೆಲ್ಬರ್ನ್ ಮತ್ತು ಸಿಡ್ನಿ ಟೆಸ್ಟ್‌ಗಳಲ್ಲಿಯೂ ಭಾರತ ತಂಡ ಗೆಲುವು ಸಾಧಿಸುವಲ್ಲಿ ವಿಫಲವಾದರೆ, ಸದ್ಯ ಇರುವ ನಾಯಕ ಕೊಹ್ಲಿ, ಕೋಚ್ ರವಿಶಾಸ್ತ್ರಿ ಮತ್ತು ಸಹಾಯಕ ಸಿಬ್ಬಂದಿಯಿಂದ ಏನಾದರೂ ಲಾಭವಾಗುತ್ತಿದೆಯೇ ಎಂದು ಗವಾಸ್ಕರ್ ಹೇಳಿದ್ದಾರೆ.

      ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಅಡಿಲೇಡ್ ಟೆಸ್ಟ್ ಪಂದ್ಯ ಗೆದ್ದು ಶುಭಾರಂಭ ಮಾಡಿತ್ತು. ಬಳಿಕ ಪರ್ತ್’ನಲ್ಲಿ ನಡೆದ ಎರಡನೇ ಟೆಸ್ಟ್’ನಲ್ಲಿ ಆಸ್ಟ್ರೇಲಿಯಾ 146 ರನ್’ಗಳಿಂದ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

LEAVE A REPLY

Please enter your comment!
Please enter your name here