ಮೋದಿ‍ಗಾಗಿ ದಕ್ಷಿಣ ಕ್ಷೇತ್ರ ಮೀಸಲು :ಉದ್ಯಾನ ನಗರಿಯಿಂದ ಸ್ಪರ್ಧೆ ಖಚಿತ?

ಬೆಂಗಳೂರು:

  ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸುವ ಎರಡನೇ ಕ್ಷೇತ್ರ ಅಂತಿಮಗೊಳ್ಳುವವರೆಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವನ್ನು ಹೆಚ್ಚುವರಿ ಕ್ಷೇತ್ರವೆಂದು ಪರಿಗಣಿಸಲು ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ನಿರ್ಧರಿಸಿದೆ.

 ಹೌದು.., ತೇಜಸ್ವಿನಿ ಅನಂತ್‌ಕುಮಾರ್ ಹೆಸರು ಇನ್ನೂ ಯಾಕೆ ಪ್ರಕಟಗೊಂಡಿಲ್ಲ ಎನ್ನುವ ಪ್ರಶ್ನೆಗೆ ಕೇಂದ್ರ ನಾಯಕರು ಪರೋಕ್ಷವಾಗಿ ಉತ್ತರ ನೀಡಿದ್ದಾರೆ.  ದಕ್ಷಿಣ ಭಾರತದಲ್ಲಿ ಸ್ಪರ್ಧಿಸುವುದಾದರೆ ಕರ್ನಾಟಕಕ್ಕಿಂತ ಸುರಕ್ಷಿತ ಮತ್ತು ಅತ್ಯುತ್ತಮ ಕ್ಷೇತ್ರ ಮೋದಿಗೆ ಮತ್ತೊಂದಿಲ್ಲ. ಹಾಗಾಗಿ ತಮ್ಮ ಸಂಪುಟ‌ ಸಹೋದ್ಯೋಗಿಯಾಗಿದ್ದ ಅನಂತ್ ಕುಮಾರ್ ಪ್ರತಿನಿಧಿಸುತ್ತಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಗ್ಗೆ ಒಲವು ಹೊಂದಿದ್ದಾರೆ ಎಂದು ಪಕ್ಷದ ವಿಶ್ವಾಸನೀಯ ಮೂಲಗಳು ಖಚಿತಪಡಿಸಿವೆ. ಆದರೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎನ್ನುವ ಮಾಹಿತಿಯನ್ನೂ ನೀಡಿವೆ.

ರಾಜ್ಯ ಉಸ್ತುವಾರಿ ಮುರುಳೀಧರರಾವ್ ಅವರಿಗೆ ಕರೆ ಮಾಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸಿದ್ಧತೆ ಮಾಡಿಕೊಳ್ಳಿ. ಮೋದಿ ಅವರ ಎರಡನೇ ಕ್ಷೇತದ ಆಯ್ಕೆ ವೇಳೆ ದಕ್ಷಿಣ ಕ್ಷೇತ್ರವನ್ನು ಕೂಡ ಪರಿಗಣಿಸುವ ಸಾಧ್ಯತೆ ಇದೆ ಎಂದು ಸೂಕ್ಷ್ಮವಾಗಿ ಮೋದಿ ಸ್ಪರ್ಧೆ ಸುಳಿವು ನೀಡಿದ್ದಾರೆ. ಆದರೆ ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸೇರಿ ರಾಜ್ಯ ಘಟಕಕ್ಕೆ ಅಧಿಕೃತ ಮಾಹಿತಿಯನ್ನು ನೀಡಿಲ್ಲ ಎಂದು ತಿಳಿದುಬಂದಿದೆ.

  ತೇಜಸ್ವಿನಿ ಅನಂತ್‌ಕುಮಾರ್ ಅವರ ಒಂದೇ ಹೆಸರನ್ನು ಕಳುಹಿಸಿಕೊಟ್ಟರೂ ಕೂಡ ಎರಡು ಪಟ್ಟಿಯಲ್ಲೂ ಅವರ ಹೆಸರು ಪ್ರಕಟಗೊಂಡಿಲ್ಲ. ಮೋದಿ ಸ್ಪರ್ಧೆ ಸಾಧ್ಯತೆಯಿಂದ ಈ ಕ್ಷೇತ್ರದ ಅಭ್ಯರ್ಥಿ ಹೆಸರು ಪ್ರಕಟ ಮುಂದೂಡಿಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

  

Recent Articles

spot_img

Related Stories

Share via
Copy link
Powered by Social Snap