ಮೈದಾನದಲ್ಲಿ ಆಟವಾಡುವಾಗಲೇ ಮೃತಪಟ್ಟ ಮಾಜಿ ಕ್ರಿಕೆಟ್ ಆಟಗಾರ !!!

0
159

ಪಣಜಿ :

     ಮೈದಾನದಲ್ಲಿ ಆಟವಾಡುವಾಗಲೇ ಕುಸಿದು ಬಿದ್ದು ಗೋವಾದ ಮಾಜಿ ರಣಜಿ ಕ್ರಿಕೆಟ್ ಆಟಗಾರನೊಬ್ಬ ಮೃತಪಟ್ಟ ದುರಂತ ಘಟನೆ ನಡೆದಿದೆ.

Image result for rajesh ghodge

      ರಾಜೇಶ್ ಘೋಡಗೆ (46) ಮೃತಪಟ್ಟ ದುರ್ದೈವಿ. ನಿನ್ನೆ ಮಾರ್ಗೋವಾದಲ್ಲಿ ನಡೆಯುತ್ತಿದ್ದ ಸ್ಥಳೀಯ ತಂಡಗಳ ಪಂದ್ಯಾವಳಿಯಲ್ಲಿ ನಾನ್ ಸ್ಟ್ರೈಕರ್ ನಲ್ಲಿ ನಿಂತು ಆಟವಾಡುತ್ತಿದ್ದ ರಾಜೇಶ್ ಅವರು ಪಂದ್ಯದ ವೇಳೆ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆಸ್ಪತ್ರೆಗೆ ಕರೆ ತರುವ ಮೊದಲೆ ಮೃತಪಟ್ಟಿದ್ದಾರೆ.

     ಮಾರ್ಗೋವಾದ ಕ್ರಿಕೆಟ್ ಕ್ಲಬ್ ಈ ಪಂದ್ಯಾವಳಿಯನ್ನು ಅಯೋಜಿಸಿತ್ತು. ರಾಜೇಶ್ ಘೋಡಗೆ ಮೈದಾನದಲ್ಲಿ ಕುಸಿದು ಬೀಳುವ ಹೊತ್ತಿಗೆ 30 ರನ್ ಗಳಿಸಿದ್ದರು.

     1999-2000ರ ಅವಧಿಯಲ್ಲಿ ಗೋವಾ ಪರ ರಣಜಿ ಟ್ರೋಫಿಯಲ್ಲಿ ಗೋಡ್ಗೆ ಅವರು ಆಡಿದ್ದರು. ನಂತರ ಸ್ಥಳೀಯ ಕ್ರಿಕೆಟ್ ನಲ್ಲಿ ನಿರತರಾಗಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

LEAVE A REPLY

Please enter your comment!
Please enter your name here