ಭವ್ಯ ಭವಿಷ್ಯದ ತಾರೆಗಳು

0
63

ಸುಂದರ ಸಮಾಜದ ನಿರ್ಮಾತೃಗಳು

ಸಾವಿರ ಕನಸುಗಳೊತ್ತ ಮುದ್ದು ಮಕ್ಕಳು

ಅರ್ಥವಿಲ್ಲದ ಸಮಾಚಾರದ ಚರ್ಚಾರ್ತಿಗಳು

ಸದಾ ನೆನಪಿನ ಅಲೆಯಲಿ ಸಾಗುವ ಕಣ್ಮಣಿಗಳು

ಮುನ್ನುಗ್ಗುವರು ಸದಾ

ಹುಮ್ಮಸ್ಸಿನಿಂದ ಕಂಗಳಲಿ ಹೊಸ ಭಾವವ ಸೂಸುತ,

ಮನದಲಿ ನವ ರಾಗವ ಗುನುಗುತ

ಕನಸಿನ ಗೋಪುರಕೆ

ಧಾವಂತದಿ ಆಗು-ಹೋಗುಗಳ ಬಗ್ಗೆ ತಿಳಿಯದವರು

ಅಂಜುತ್ತ ಅಳುಕುತ್ತ ಮುನ್ನುಗ್ಗುವರು

ಸುಭದ್ರ ದೇಶದ ಆಧಾರಗಳಿವರು

ಭವ್ಯ ಭವಿಷ್ಯದ ಕನಸುಗಾರರಿವರು

-ಮಂಜುನಾಥ, ಮಂಗಾಪುರ

LEAVE A REPLY

Please enter your comment!
Please enter your name here