“ನನಸಾಗದ ಕನಸು “

0
68

ಮುಸ್ಸಂಜೆ ವೇಳೆಯಲಿ
ಆ ಕಡಲ ತೀರದಲಿ
ಒಂಟಿ ಬಂಡೆಯ ಕೆಳಗೆ
ನಿನ್ನೊಟ್ಟಿಗೆ ಮಾತನಾಡುವಸೆ

ನಮ್ಮಿಬ್ಬರ ನೋಡಿ
ನಾಚಿ ಕೆಂಪಾದ ಸೂರ್ಯನ
ಮುಳುಗುವ ಮುನ್ನ
ಒಮ್ಮೆ ಹಿಡಿಯುವಾಸೆ

Related image

ನಮ್ಮೀ ಒಲವಿನ ಮಾತಿಗೆ
ಅಲೆಗಳು ಸಂಗೀತ ಕೊಡಲು
ನಿನ್ನೊಂದಿಗೆ ಹೆಜ್ಜೆ ಹಾಕುವಾಸೆ

ಹೂವಾದ ಭಾವಗಳು
ಅಲೆಗಳೆಡೆ ಮುನ್ನುಗ್ಗುತಿರಲು
“ಕೈಯೊಳಗೆ ಕೈ ಇಟ್ಟು
ಒಮ್ಮೆ ನಿನ್ನೆದೆಗೊರಗುವ ಆಸೆ “

Related image

ನಿಜ ಹೇಳು ನಲ್ಲೇ,!
ನೀ ಬರುವೆಯಾ ನನ್ನೊಟ್ಟಿಗೆ
ಈ ಸಂಜೆ ತಂಪಾಗಿಸಲು ?
ನನ್ನೀ ಬಯಕೆ ತೀರಿಸಲು ! ? ?

ಅರೆಯೂರು ಶ್ರೀವೈದ್ಯಸುತ
ಅ.ವೈದ್ಯನಾಥಪುರ
 

LEAVE A REPLY

Please enter your comment!
Please enter your name here