ರಸಋಷಿ

0
44

Related image

ನಡೆ-ನುಡಿಯಲ್ಲಿ
ಕನ್ನಡ ಡಿಂಡಿಮ ಬಾರಿಸಿದ ಕವಿ
ಬರೆದಂತೆ ಬದುಕಿದ
ಕನ್ನಡ ಕಾವ್ಯದ ಮಹಾಕವಿ

ಮಲೆನಾಡ ಸೊಬಗನು
ರಸಪದಗಳಲಿ ಶೃಂಗರಿಸಿದ ಕವಿ
ಕವಿಶೈಲದ ಶಿಲೆಗಳಿಗೆ
ಜೀವವಂ ನೀಡಿದ ಮಹಾತಪಸ್ವಿ ಕವಿ

Image result for kuvempuಜಾತಿ-ಮತಗಳ ಹೊಟ್ಟ ತೂರಿದ
ಮನುಜಮತ ವಿಶ್ವಪಥದ ಕವಿ
ಸರ್ವೋದಯಕೆ ಸರ್ವಸಮತೆ
ಸಾರಿದ ವಿಶ್ವಮಾನವ ಕವಿ

ಎಂತು ಬಣ್ಣಿಸಿದರು ತಣಿಸದು ಮನವು
ಎನಗೆ, ಓ…’ಯುಗದಕವಿ ಜಗದಕವಿ’
ಏನೆಂದು ಬಣ್ಣಿಸಲಿ..?
ನಾನೊಬ್ಬ ತೊದಲುಕವಿ!
ಬಣ್ಣಿಸಿದರದು ಅಲ್ಪವಾದಿತು ರಾಷ್ಟ್ರಕವಿ

ವಿಶ್ವಮಾನವ ದಿನಾಚರಣೆಯ ಹಾರ್ದಿಕ ಶುಭಾಶಯಗಳು

-ರುದ್ರಸ್ವಾಮಿ ಹರ್ತಿಕೋಟೆ.

LEAVE A REPLY

Please enter your comment!
Please enter your name here