ಹೊಸಪೇಟೆ ತಾಲೂಕಿನ ಕಾಕುಬಾಳು ಹೊಲ ವೀಕ್ಷಣೆ ಮಾಡಿದ ಜಗಧೀಶ್ ಶೆಟ್ಟರ್

0
12

ಬಳ್ಳಾರಿ

         ರಾಜ್ಯದ 100ಕ್ಕೂ ಅಧಿಕ ತಾಲೂಕುಗಳಲ್ಲಿ ರಾಜ್ಯ ಸರ್ಕಾರ ಬರವೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಪ್ರವಾಸ ಮುಗಿಸಿ ಇಂದು ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಕಾಕುಬಾಳು ಗ್ರಾಮಕ್ಕೆ ಮಾಜಿ ಸಿಎಂ ಜಗಧೀಶ್ ಶೆಟ್ಟರ್ ಭೇಟಿ ನೀಡಿದರು.

          ಗ್ರಾಮದ ರೈತ ವಿರೂಪಾಕ್ಷಪ್ಪ ಹೊಲಕ್ಕೆ ಭೇಟಿ ನೀಡಿದ ಶೆಟ್ಟರ್ ಲಕ್ಷಾಂತರ ರೂಪಾಯಿ ವ್ಯಯಿಸಿ ಮೆಕ್ಕೆ ಜೋಳ ಬಿತ್ತನೆ ಮಾಡಿ ಕೈಸುಟ್ಟುಕೊಂಡ ರೈತನಿಗೆ ಸಾಂತ್ವನ ಹೇಳಿದರು. ಬೋರವೆಲ್ ಹಾಕಿಸಿದ್ದರೂ ನೀರು ಬತ್ತಿ ಹೋಗಿದೆ. ಇರುವ ನೀರಿನ ಭರವಸೆಯಿಂದ ಹಾಕಿದ್ದ 5 ಎಕರೆ ಮೆಕ್ಕೆಜೋಳ ಸಂಪೂರ್ಣವಾಗಿ ನಾಶವಾಗಿ ಹೋಗಿದೆ. ಕಾಳು ಕಟ್ಟುವಾಗಲೇ ಕಾಯಿಕೊರಕ ಹುಳುಗಳ ಬಾಧೆಯಿಂದ ತೆನೆ ಮುರುಟಿ ಹೋಗಿವೆ. ಇದೇ ಪರಿಸ್ಥಿತಿ ಬಹುತೇಕ ಎಲ್ಲ ರೈತರದ್ದಾಗಿದೆ ಎಂದು ಸ್ಥಳೀಯ ಕೃಷಿಕರು ಮಾಜಿ ಸಿಎಂ ಅವರಿಗೆ ಮನವರಿಕೆ ಮಾಡಿಕೊಟ್ಟರು.

         ಶೆಟ್ಟರ್ ಅವರೊಂದಿಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷರು, ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು, ಶಾಸಕರಾದ ಹಾಲಪ್ಪ ಆಚಾರ್, ಎಂಎಸ್ ಸೋಮಲಿಂಗಪ್ಪ, ರೈತ ಮೋರ್ಚಾದ ಮುಖಂಡರಾದ ಶಂಕರಗೌಡ ಪಾಟೀಲ್, ಈಶ್ವರಚಂದ್ರ ಹೊಸಮನೆ, ಬಿಜೆಪಿ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ, ಮುಖಂಡರಾದ ಡಾ.ಮಹಿಪಾಲ್, ಮುರಾರಿಗೌಡ, ಡಿ.ರಾಘವೇಂದ್ರ, ರಾಮಚಂದ್ರ, ಕಿಶೋರ್ ಬಾಬು ಇನ್ನಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here