ಪ್ರಜಾಪ್ರಗತಿ ವರದಿಗೆ ಆವರಗೊಳ್ಳದಲ್ಲಿ ಫಲಶೃತಿ

0
20

ದಾವಣಗೆರೆ:

         ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಉತ್ಪತ್ತಿ ಯಾಗುತ್ತಿರುವ ತ್ಯಾಜ್ಯವನ್ನು ತಾಲೂಕಿನ ಆವರಗೊಳ್ಳದ ಡಂಪಿಂಗ್ ಯಾರ್ಡ್‍ನಲ್ಲಿ ಸುರಿಯಲು ಬೃಹತ್ ತ್ಯಾಜ್ಯ ಹೊತ್ತು ಹೋಗುವ ವಾಹನಗಳ ಭಾರದಿಂದ ಆವರೊಗಳ್ಳ ಗ್ರಾಮದ ರಸ್ತೆಯಲ್ಲಿ ಅಳವಡಿಸಿದ್ದ ಯುಜಿಡಿ ಪೈಪ್‍ಲೈನ್ ಕುಸಿದು ಬ್ಲಾಕ್ ಆಗಿತ್ತು.

        ಹೀಗಾಗಿ ಕೊಚ್ಚೆ ನೀರು ಮುಂದೆ ಹೋಗಲು ಸಾಧ್ಯವಾಗದೇ ಗ್ರಾಮದಲ್ಲಿ ಸಮಸ್ಯೆ ಉದ್ಭವಿಸಿತ್ತು.ಈ ಬಗ್ಗೆ ಪ್ರಾಜಾಪ್ರಗತಿ ದಿನ ಪತ್ರಿಕೆಯು 2018ರ ಸೆಪ್ಟೆಂಬರ್ 13ರ ಸಂಚಿಕೆಯಲ್ಲಿ ವಿಸ್ತøತ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಪಾಲಿಕೆ ಅಧಿಕಾರಿಗಳು ಆವರಗೊಳ್ಳ ಗ್ರಾಮದಲ್ಲಿ ಹೊಸ ಒಳ ಚರಂಡಿ ಕಾಮಗಾರಿ ಆರಂಭಿಸಿದೆ. ಇದರಿಂದ ಗ್ರಾಮಸ್ಥರು, ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ನಿಟ್ಟುಸಿರು ಬಿಟ್ಟು ಹರ್ಷ ವ್ಯಕ್ತಪಡಿಸಿದ್ದಾರೆ.

       ಈಗ ಪಾಲಿಕೆ ಕೈಗೊಂಡಿರುವ ಕಾಮಗಾರಿಯನ್ನು ಗುಣಮಟ್ಟದಿಂದ ನಡೆಸಬೇಕೆಂದು ಪಾಲಿಕೆ ಅಧಿಕಾರಿಗಳನ್ನು ಗ್ರಾ.ಪಂ. ಸದಸ್ಯರು, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ವೀರಣ್ಣ ಜಿ.ಟಿ. ಆಗ್ರಹಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

LEAVE A REPLY

Please enter your comment!
Please enter your name here