ಅಂಬರೀಶ್ ಸಮಾಧಿಗೆ ಪೂಜೆ ಸಲ್ಲಿಕೆ

0
9

ಬೆಂಗಳೂರು:

          ಮಾಜಿ ಸಚಿವ,ನಟ ಅಂಬರೀಶ್ ವಿಧಿವಶರಾಗಿ ಇಂದಿಗೆ 11 ದಿನ ಕಳೆದಿದೆ.ಇದರ ಹಿನ್ನೆಲೆಯಲ್ಲಿ ಇಂದು ಅಂಬರೀಶ್ ಪತ್ನಿ ಸುಮಲತಾ,ಪುತ್ರ ಅಭಿಷೇಕ್,ನಟ ದರ್ಶನ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಹಾಗೂ ಸಾಕಷ್ಟು ಅಭಿಮಾನಿಗಳು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಸಮಾಧಿಗೆ ಪೂಜೆ ಸಲ್ಲಿಸಿ, ಹಾಲು ತುಪ್ಪ ಬಿಡುವ ಕಾರ್ಯ ನಡೆಸಿದರು.

          ಕಂಠೀರವ ಸ್ಟುಡಿಯೋದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮನೆಯಲ್ಲಿ ಅಂಬಿಗೆ ಇಷ್ಟವಾದ ತಿಂಡಿ ತಿನಿಸುಗಳನ್ನಿಟ್ಟು ಹಾಗೂ ಅಂಬಿ ಉಪಯೋಗಿಸುತ್ತಿದ್ದ ಸಾಮಾಗ್ರಿಗಳನ್ನು ಪೂಜೆಗೆ ಇರಿಸಲಾಯಿತು. ನಂತರ ಪೂಜೆಗೆ ಇಟ್ಟ ತಿಂಡಿ ತಿನಿಸುಗಳನ್ನು ಪ್ರಸಾದ ರೀತಿಯಲ್ಲಿ ಮನೆಯವರು ಸೇವಿಸಿದರು.ಇದಲ್ಲದೆ,ಮನೆಯಲ್ಲಿ ನಡೆದ ಪೂಜೆಯಲ್ಲಿ ಕುಟುಂಬಸ್ಥರು, ಆಪ್ತರಷ್ಟೇ ಭಾಗಿಯಾಗಿದ್ದರು.
ಈ ನಡುವೆ ಅಂಬರೀಶ್ ಅಭಿಮಾನಿಗಳು ತಲೆ ಬೋಳಿಸಿಕೊಳ್ಳುವ ಮೂಲಕ ತಮ್ಮ ಅಭಿಮಾನ ಮರೆದಿದ್ದಾರೆ.

         ಇದಲ್ಲದೆ,ಅಭಿಮಾನಿಗಳಿಗೆ ಕಂಠೀರವ ಸ್ಟುಡಿಯೋ ಬಳಿ 15 ಕೌಂಟರ್‍ನಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು .ಭದ್ರತೆಗಾಗಿ 300ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿತ್ತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here