ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ಅನಿವಾರ್ಯ : ಸಚಿವ ವೆಂಕಟರವಣಪ್ಪ

ಪಾವಗಡ

       ದೇಶದಲ್ಲಿ ಬಿಜೆಪಿ ರಹಿತ ಸರ್ಕಾರ ರಚನೆ ಮಾಡುವ ಅನಿವಾರ್ಯತೆ ಎದುರಾಗಿದೆ ಎಂದು ಕಾರ್ಮಿಕ ಸಚಿವ ವೆಂಕಟರವಣಪ್ಪ ತಿಳಿಸಿದರು.

        ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪ್ರಚಾರಕ್ಕೆ ಸೀಮಿತವಾದ ಮೋದಿಯವರು ದೇಶಕ್ಕೆ ನೀಡಿದ ಕೊಡುಗೆ ಶೂನ್ಯ. ಗಂಗಾ ಕಾವೇರಿ ನದಿಜೋಡಣೆ, ಮಹಾದಾಯಿ ಹೋರಾಟದ ರೈತರಿಗೆ ನೆರವಾಗಬೇಕಿದ್ದ ಕೇಂದ್ರ ಸರ್ಕಾgವು ರಾಜ್ಯದ ರೈತರನ್ನು ತಿರಸ್ಕರಿಸಿದೆ. ಇಂತಹವರಿಗೆ ಕರ್ನಾಟಕದಲ್ಲಿ ಬಿಜೆಪಿ ಮತ ಕೇಳುವ ನೈತಿಕತೆ ಇಲ್ಲವೆ ಇಲ್ಲ. ವಿದೇಶಗಳನ್ನು ಸುತ್ತುವುದರಲ್ಲೆ ಐದು ವರ್ಷ ಕಾಲ ಕಳೆದ ಪ್ರಧಾನಿ ನರೇಂದ್ರಮೋದಿಗೆ ದೇಶದ ಅನ್ನದಾತನ ರೋದನವು ಕಾಣಿಸಲೆ ಇಲ್ಲ, ಕೇಳಿಸಲೆ ಇಲ್ಲ. ಈ ಬಗ್ಗೆ ಮತ ಕೇಳಲು ಬಂದಾಗ ಬಿಜೆಪಿಯವರನ್ನು ಮತದಾರರು ಪ್ರಶ್ನಿಸಬೇಕು. ಎರಡಣೆ ಬಾರಿ ಸಮ್ಮಿಶ್ರ ಸರ್ಕಾರದ ಅಭ್ಯರ್ಥಿಯಾಗಿ ಚಂದ್ರಪ್ಪ ಸ್ಪರ್ಧಿಸುತ್ತಿದ್ದು , ಇವರನ್ನು ಗೆಲ್ಲಿಸುವ ಮೂಲಕ ಕೋಮುವಾದಿ ಬಿಜೆಪಿಗೆ ಸ್ವಾಭಿಮಾನಿ ಮತದಾರರು ಪಾಠ ಕಲಿಸಬೇಕೆಂದರು.

        ಚಿತ್ರದುರ್ಗ ಲೋಕಸಭಾ ಸಂಸದರು ಹಾಗೂ ಅಭ್ಯರ್ಥಿಯಾದ ಚಂದ್ರಪ್ಪರವರು ಮಾತನಾಡಿ, ಬಿಜೆಪಿಯವರಿಗೆ ಜಾತಿ ಜಾತಿಗಳ ಮಧ್ಯೆ ಕೋಮುಗಲಭೆ ಸೃಷ್ಟಿಸುವುದು ಬಿಟ್ಟರೆ ಬೇರೇನೂ ತಿಳಿಯದು. ಪೂರ್ಣ ಬಹುಮತದಿಂದ ಪ್ರಧಾನಿಯಾದ ನಂತರ ದೇಶದ ಜನತೆಗೆ ನೀಡಿದ ಭರವಸೆಯಂತೆ ಜನಸಾಮಾನ್ಯರ ಖಾತೆಗೆ 15 ಲಕ್ಷ ಹಣ ಜಮಾ ಮಾಡಲಿಲ್ಲ. ವರ್ಷವೊಂದಕ್ಕೆ ಎರಡು ಕೋಟಿ ಉದ್ಯೋಗದಂತೆ ಒಟ್ಟು ಐದು ಕೋಟಿ ಉದ್ಯೋಗ ನೀಡುವ ಬದಲು ಪಕೋಡ ಮಾರಿದರೂ ಉದ್ಯೋಗವೆ ಎಂದ ಪ್ರಧಾನಿಗೆ ಕೊನೆಗೆ ಬರದಿಂದ ತತ್ತರಿಸಿದ ರಾಜ್ಯದ ರೈತರ ಸಾಲಮನ್ನಾ ಮಾಡಲು ಸಾಧ್ಯವಾಗದೆ, ನಮ್ಮ ದೇಶದ ಪ್ರಚಾರಕ್ಕೆ ಸೀಮಿತವಾದ ಹೆಮ್ಮೆಯ ಪ್ರಧಾನಿ ಈ ಮೋದಿ ಎಂದು ಲೇವಡಿ ಮಾಡಿದರು.

        ಮನಮೋಹನ್ ಸಿಂಗ್ ದೇಶದ ರೈತರ 72 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದ ಏಕೈಕ ನಮ್ಮ ಕಾಂಗ್ರೆಸ್‍ನ ಹೆಮ್ಮ್ಮೆಯ ಪ್ರಧಾನಿ. ಜಾತಿ ಎಂಬುದು ಭಯಾನಕ ಕ್ಯಾನ್ಸರ್ ಇದ್ದಂತೆ. ಇದರ ಆಧಾರದ ಮೇಲೆ ಬಿಜೆಪಿ ನಡೆಯುತ್ತಿದೆ. ಕೋಮುವಾದಿಗಳಿಗೆ ಬುದ್ದಿಕಲಿಸಬೇಕಾದ ಸಮಯ ಸಮೀಪಿಸಿದೆ. ಸಂವಿಧಾನ ಬದಲಾವಣೆ ಮಾಡಲು ಹೊರಟವರಿಗೆ ಬುದ್ದಿ ಕಲಿಸಿ, ನಾವೆಲ್ಲರೂ ಅಂಬೇಡ್ಕರ್ ರಚಿಸಿದ ಸಂವಿಧಾನ ಪಾಲನೆ ಮಾಡೋಣ.

        ಜಾತ್ಯತೀತ ತತ್ವದ ಮೇಲೆ ನಡೆಯ ಬೇಕಾದರೆ ಸಮ್ಮಿಶ್ರ ಸರ್ಕಾರದ ಅಭ್ಯರ್ಥಿಯಾದ ನನಗೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ಮತ್ತೊಮ್ಮೆ ಆಶೀರ್ವದಿಸಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.

        ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ಮಾತನಾಡಿ, ಸಮ್ಮಿಶ್ರ ಸರ್ಕಾರದ ಆದೇಶವನ್ನು ನಾವೆಲ್ಲರೂ ಪಾಲಿಸಬೇಕು. ಕಾರಣ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆಯುವ ಕಾಲ ಸನ್ನಿಹಿತವಾಗಿದೆ. ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಬದಿಗೊತ್ತಿ ಮತ್ತೊಮ್ಮೆ ಸಂಸರಾದ ಚಂದ್ರಪ್ಪರವರನ್ನು ಆಯ್ಕೆ ಮಾಡಿ ಕೋಮುವಾದಿ ಬಿಜೆಪಿಗೆ ಬುದ್ದಿ ಕಲಿಸಬೇಕೆಂದರು.

         ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಮಾಜಿ ಶಾಸಕರಾದ ಸಾ.ಲಿಂಗಯ್ಯ, ಸೋಮ್ಲಾನಾಯ್ಕ್, ಉಗ್ರ ನರಸಿಂಹಪ್ಪ, ಜಿ.ಪಂ.ಸದಸ್ಯ ಹೆಚ್.ವಿ.ವೆಂಕಟೇಶ್, ಪಾಪಣ,್ಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೇಶ್ ಬಾಬು, ಜೆಡಿಎಸ್ ಅಧ್ಯಕ್ಷ ಬಲರಾಮರೆಡ್ಡಿ, ತಾಪಂ ಅಧ್ಯಕ್ಷ ಸೊಗಡು ವೆಂಕಟೇಶ್, ಮುಖಂಡರಾದ ತಿಮ್ಮ್ಮಾರೆಡ್ಡಿ, ಆರ್.ಸಿ. ಆಂಜಿನಪ್ಪ, ಎಸ್.ಕೆ.ರೆಡ್ಡಿ, ಕೋಳಿ ಬಾಲಾಜಿ, ನರಸಿಂಹಯ್ಯ, ಪುರಸಭಾ ಮಾಜಿ ಅಧ್ಯಕ್ಷ ಮಾನಂ ವೆಂಕಟಸ್ವಾಮಿ, ಶಂಕರ್ ರೆಡ್ಡಿ, ತಾ.ಪಂ.ಸದಸ್ಯರಾದ ಹನುಮಂತರಾಯಪ್ಪ, ನರಸಿಂಹ, ಪುರಸಭಾ ಸದಸ್ಯ ರಾಜೇಶ್, ಮನುಮಹೇಶ್, ಬಾಲಸುಬ್ರಹ್ಮಣ್ಯ ಮುಂತಾದವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap